ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ ಅಫ್ಘಾನಿಸ್ತಾನ ತಂಡವು ಶಕ್ತಿಯುತವಾಗಿ ಬೆಳೆದು ನಿಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರಂಭಿಕ ದಿನಗಳ ಸ್ಟಾರ್ ವೇಗದ ಬೌಲರ್ ಶಾಪೂರ್ ಜದ್ರಾನ್ ಅವರು ಜು.7ರಂದು ನಿಧನರಾಗಿದ್ದಾರೆ.
ಅವರಿಗೆ ಕೇವಲ 38 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ‘ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್’ (HLH) ಎಂಬ ಅತ್ಯಂತ ಅಪರೂಪದ ಮತ್ತು ಪ್ರಾಣಾಪಾಯ ಉಂಟುಮಾಡುವ ರೋಗನಿರೋಧಕ ಶಕ್ತಿಯ ಅಸ್ವಸ್ಥತೆಯಿಂದ (Immune Disorder) ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ.

