ಮಿಂಚಿಪದವು ಶ್ರೀ ಕ್ಷೇತ್ರ ಸನ್ನಿಧಿಯಲ್ಲಿ ಅಕ್ಟೋಬರ್ 17 ರಂದು ಕಾವೇರಿ ತೀರ್ಥೋದ್ಭವ ಸಂಭ್ರಮ

ಮಂಗಳೂರು: ಕಾಸರಗೋಡು ಜಿಲ್ಲೆಯ ಮಿಂಚಿಪದವು ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಹೊಂದಿಕೊಂಡಿರುವಂತೆ ಪೂರ್ವ ದಿಕ್ಕಿನಲ್ಲಿ ನೈಸರ್ಗಿಕವಾಗಿ ಗುಹಾದ್ವಾರದ ಮೂಲಕ ನಿರಂತರವಾಗಿ ಪ್ರವಹಿಸುವ ಮಾತೃ ಸ್ವರೂಪಿಣಿಯಾದ ಮಾತೆಯ ಸನ್ನಿಧಾನವೇ ಕಾವೇರಿಯಮ್ಮನ ಪುಷ್ಕರಿಣಿ. ಇಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ದಿನಾಂಕ ಅಕ್ಟೋಬರ್ 17 ರ ತುಲಾ ಸಂಕ್ರಮಣದಂದು ಅಪರಾಹ್ನ 1.46 ರ ಶುಭ ವೇಳೆಯಲ್ಲಿ ಕಾವೇರಿ ತೀರ್ಥೋದ್ಭವ ಸಂಭ್ರಮ ನಡೆಯಲಿದೆ ಎಂದು ಕಾವೇರಿಯಮ್ಮ ಬ್ರಹ್ಮಕಲಶ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಮಧುಸೂಧನ್ ಆಯರ್ ತಿಳಿಸಿದರು.

ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಕಾವೇರಿ ತೀರ್ಥೋದ್ಭವ ಸಂಭ್ರಮವು
ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ರವೀಶ ತಂತ್ರಿಗಳ ಸಮಕ್ಷಮ ಹಾಗೂ ಕಕ್ಕಿಲಾಯ ಕುಟುಂಬಸ್ಥರು ಬೇವಿಂಜೆ ಅವರ ಸಹಭಾಗಿತ್ವದಲ್ಲಿ ಮತ್ತು ಸಾವಿರಾರು ಭಕ್ತರ ಹರ್ಷೋದ್ಗಾರದೊಂದಿಗೆ ನಡೆಯಲಿದೆ . ಆ ಬಳಿಕ ಕಾವೇರಿಯಮ್ಮನ ಶಿಲಾಮಯ ಮೂರ್ತಿಗೆ ತೀರ್ಥಾಭಿಷೇಕ ಹಾಗೂ ಶ್ರೀ ಮಾತೆಗೆ ಕುಂಕುಮಾರ್ಚನೆ ನಡೆಯಲಿಕ್ಕಿದೆ. ಮುಂದುವರಿದು ಇದೆ ತೀರ್ಥದಿಂದ ಆರಾಧ್ಯ ಮೂರ್ತಿಯಾದ ಶಿವನಿಗೆ ಜಲಾಭಿಷೇಕ ಮತ್ತು ಮಹಾಪೂಜೆ ನಡೆಲಿದೆ ಎಂದು ತಿಳಿಸಿದರು .

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ದಾಮೋದರ ಎಮ್ , ಶಿವರಾಮ್ , ಗಂಗಾಧರ್ ಮುಂತಾದವರು ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!