ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಹೃದಯಾಘಾತದಿಂದ ಕೇರಳದಲ್ಲಿ ನಿಧನ…. !

ಕೊಚ್ಚಿ: ಕೀನ್ಯಾದ ಮಾಜಿ ಪ್ರಧಾನಿ ಬುಧವಾರ ಬೆಳಿಗ್ಗೆ ಕೇರಳದ ಎರ್ನಾಕುಲಂ ಜಿಲ್ಲೆಯ ಕೂತಟ್ಟುಕುಳಂನಲ್ಲಿ ವಾಕಿಂಗ್ ಮಾಡುವಾಗ ಹೃದಯಾಘಾತದಿಂದ ನಿಧನರಾದರು ಎಂದು ಪೊಲೀಸರು ಮತ್ತು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.80 ವರ್ಷದ ಓಡಿಂಗಾ ಅವರು ಬೆಳಗಿನ ವಾಕಿಂಗ್ ಸಮಯದಲ್ಲಿ ಕುಸಿದು ಬಿದ್ದಿದ್ದು. ಕೂಡಲೇ ಕೂತಟ್ಟು ಕುಳಂನಲ್ಲಿರುವ ಶ್ರೀಧರೀಯಂ ಆಯುರ್ವೇದ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರು ಬೆಳಿಗ್ಗೆ 9.52 ರ ಸುಮಾರಿಗೆ ನಿಧನರಾದರು ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.


ಆರು ದಿನಗಳ ಹಿಂದೆ ಓಡಿಂಗಾ ಅವರ ಮಗಳು ಮತ್ತು ನಿಕಟ ಕುಟುಂಬ ಸದಸ್ಯರೊಂದಿಗೆ ಕೂತಟ್ಟು ಕುಳಂಗೆ ಆಗಮಿಸಿದ್ದರು. ಅವರು ಆಸ್ಪತ್ರೆಯಲ್ಲಿ ವಾಕಿಂಗ್ ಮತ್ತು ಚಿಕಿತ್ಸಾ ಅವಧಿಗಳನ್ನು ಅನುಸರಿಸುತ್ತಿದ್ದರು. ಅವರ ಮೃತದೇಹವನ್ನು ಪ್ರಸ್ತುತ ಇಲ್ಲಿನ ದೇವ ಮಾತಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!