ಜನವರಿ 16 ರಂದು ಟೈ ಮಂಗಳೂರು ವತಿಯಿಂದ ಸಿಲಿಕಾನ್ ಬೀಚ್ ಸ್ಟಾರ್ಟಪ್ ಸಮಾವೇಶ – ಟೈಕಾನ್ ಮಂಗಳೂರು 2026 , ಯುವ ಸ್ಟಾರ್ಟಪ್ ಗಳಿಗೆ ಸುವರ್ಣ ಅವಕಾಶ … !

ಮಂಗಳೂರು:ರಾಷ್ಟ್ರೀಯ ಸ್ಟಾರ್ಟಪ್ ದಿನವಾದ ಜ. 16 ರಂದು ಮಂಗಳೂರಿನಲ್ಲಿ ಸಿಲಿಕಾನ್ ಬೀಚ್ ಸ್ಟಾರ್ಟಪ್ ಸಮಾವೇಶ ಟೈಕಾನ್ ಮಂಗಳೂರು 2026, ಡಾ. ಟಿ ಎಂ ಏ ಪೈ ಕನ್ವೆನ್ನನ್ ಸೆಂಟರ್ ನಲ್ಲಿ ಜರುಗಲಿದೆ ಎಂದು ಟೈ ಮಂಗಳೂರು ಇದರ ಸ್ಥಾಪಕ ಅಧ್ಯಕ್ಷರಾದ ರೋಹಿತ್ ಭಟ್ ತಿಳಿಸಿದರು .ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮದಲ್ಲಿ 500 ಕ್ಕೂ ಅಧಿಕ ಪ್ರತಿನಿಧಿಗಳು,50ಕ್ಕೂ ಅಧಿಕ ಹೂಡಿಕೆದಾರರು , 40ಕ್ಕೂ ಅಧಿಕ ಆಹ್ವಾನಿತ ಗಣ್ಯರು , 30ಕ್ಕೂ ಅಧಿಕ ಸ್ಟಾರ್ಟಪ್ ಪ್ರದರ್ಶಕರು ಭಾಗವಹಿಸಲಿದ್ದಾರೆ ಎಂದರು .

ಟೈ ಎಂದು ಪ್ರಖ್ಯಾತವಾಗಿರುವ ಅಂತಾರಾಷ್ಟ್ರೀಯ ಉದ್ಯಮ ಉತ್ತೇಜನ ಸಂಸ್ಥೆ ದಿ ಇಂಡಸ್ ಎಂಟಪ್ರ್ರನರ್ಸ್ ಇದರ ಮಂಗಳೂರು ಚಾಪ್ಟರ್, ಟೈಕಾನ್ ಮಂಗಳೂರು 2026ನ್ನು ಆಯೋಜಿಸುತ್ತಿದ್ದು ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ (KDEM) ಹಾಗೂ ಸಿಲಿಕಾನ್ ಬೀಚ್ ಪ್ರೋಗ್ರಾಮ್ ಇದರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು .ಕರಾವಳಿ ಕರ್ನಾಟಕವು ಸೃಜನಶೀಲ ಉದ್ಯಮಿಗಳು ಹಾಗೂ ಹೂಡಿಕೆದಾರರಿಗೆ ಆಕರ್ಷಕ ತಾಣವಾಗಿ ಹೊರಹೊಮ್ಮುತ್ತಿರುವುದನ್ನು ಜಗತ್ತಿಗೆ ತೋರಿಸುವ ಕಾರ್ಯವನ್ನು ಉತ್ತೇಜಿಸುವ ಉದ್ದೇಶವನ್ನು ಇದು ಹೊಂದಿದೆ ಎಂದರು .

ಕಾರ್ಯಕ್ರಮದಲ್ಲಿ ರಾಜ್ಯದ ಮಾಹಿತಿ ತಂತ್ರಜ್ಞಾನ – ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ , ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟ , ಭಾರತ ಸರಕಾರದ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಎಸ್. ಕೃಷ್ಣನ್ , ಕರ್ನಾಟಕ ಸರಕಾರದ ಮಾಹಿತಿ – ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಮಂಜುಳಾ ಮುಖ್ಯ ಗಣ್ಯರಾಗಿ ಭಾಗವಹಿಸಲಿರುವರು ಎಂದರು .

ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಆಕ್ಸೆಲ್ ಇಂಡಿಯಾ ಪಾಲುದಾರ ಪದ್ಮಶ್ರೀ ಪ್ರಶಾಂತ್ ಪ್ರಕಾಶ್, ಟೈಇ ಜಾಗತಿಕ ಅಧ್ಯಕ್ಷ ಮುರಳಿ ಬುಕ್ಕಾಪಟ್ಟಣಂ, ತ್ರೀ ವನ್ ಫೋರ್ ಕ್ಯಾಪಿಟಲ್ ಅಧ್ಯಕ್ಷ ಮೋಹನ್ ದಾಸ್ ಪೈ, ಡೆಲಾಯ್ಟ್ ದಕ್ಷಿಣ ಏಷ್ಯಾ ಸಿಇಒ ರೋಮಲ್ ಶೆಟ್ಟಿ, ನಟ-ಉದ್ಯಮಿ ಸುನೀಲ್ ಶೆಟ್ಟಿ, ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ಮತ್ತು ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ ಸಂಪನ್ಮೂಲ ವ್ಯಕ್ತಿಗಳಾಗಿ ಸೇರಿಕೊಳ್ಳಲಿದ್ದಾರೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಟೈಕಾನ್ ಮಂಗಳೂರು 2026 ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಶಾಂತ್ ರಾವ್ ಆರೂರ್ , ಯುನಿಫೈ ಸಿ ಎಕ್ಸ್ ನ ಚೀಫ್ ಪೀಪಲ್ ಸರ್ವೀಸಸ್ ಆಫೀಸರ್ ಶ್ಯಾಮ್ ಪ್ರಸಾದ್ ಹೆಬ್ಬಾರ್, ಕರುಣಾ ಇಂಫ್ರಾ ನಿರ್ದೇಶಕ ಸುದೇಶ್ ಕರುಣಾಕರನ್, ಯುನಿಕೋರ್ಟ್ ಕೋ ಫೌಂಡರ್ ಆ್ಯಂಡ್ ಸಿಇಒ ಪ್ರಶಾಂತ್ ಶೆಣೈ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!