ಮಂಜೇಶ್ವರ: ಕಾಪಾ ಕಾಯ್ದೆಯಡಿ ಬಂಧಿಸಿ ನಾಡು ಹೊರಗಟ್ಟಲಾಗಿದ್ದ ಪ್ರಕರಣದ ಆರೋಪಿ ಮತ್ತೆ ಪ್ರದೇಶಕ್ಕೆ ಮರಳಿದ್ದಾನೆ. ಪೊಲೀಸರು ಅವನನ್ನು ಮರುಬಂಧಿಸಿ ಜೈಲಿಗಟ್ಟಿದ್ದಾರೆ.ಪಾವೂರು ನಿವಾಸಿ ಅಬ್ದುಲ್ ಬಶೀರ್ (38) ಎಂಬಾತನನ್ನು ಮಂಜೇಶ್ವರಂ ಪೊಲೀಸರು ಬಂಧಿಸಿ ನ್ಯಾಯಾಲಯದ ಆದೇಶದಂತೆ ಜೈಲಿಗೆ ರವಾನಿಸಿದ್ದಾರೆ.
ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಬಶೀರ್‌ಗೆ ಕಾಪಾ ಕಾಯ್ದೆಯಡಿ ಕಾಸರಗೋಡು ಜಿಲ್ಲೆಗೆ ಮೂರು ತಿಂಗಳು ಪ್ರವೇಶಿಸಬಾರದು ಎಂದು ಪೊಲೀಸರು ನಾಡು ಹೊರಗಟ್ಟಿದ್ದರು.ಆದರೆ ಇತ್ತೀಚೆಗೆ ರಾತ್ರಿ ಸಮಯದಲ್ಲಿ ಪೊಲೀಸರು ನಡೆಸಿದ ತಪಾಸಣೆಯ ವೇಳೆ ಪಾವೂರಿನಲ್ಲಿ ಬಶೀರ್ ಪತ್ತೆಯಾಗಿದ್ದು, ತಕ್ಷಣವೇ ಅವನನ್ನು ವಶಕ್ಕೆ ಪಡೆಯಲಾಗಿದೆ.