ಕಾಸರಗೋಡು: ವಿದ್ಯಾನಗರದಲ್ಲಿರುವ ಕಾಸರಗೋಡು ನ್ಯಾಯಾಲಯ ಸಮುಚ್ಛಯಕ್ಕೆ ಗುರುವಾರ ಬೆಳಿಗ್ಗೆ ಇಮೇಲ್ ಸಂದೇಶದ ಮೂಲಕ ಯಾರೋ ಬಾಂಬ್ ಬೆದರಿಕೆಯೊಡ್ದಿದ್ದಾರೆ.ಈ ಬಗ್ಗೆ ಆಧಿಸಿದ ಮಾಹಿತಿಯಂತೆ ವಿದ್ಯಾನಗರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಶೋಧ ಆರಂಭಿಸಿದ್ದಾರೆ. ಶೋಧ ಕಾರ್ಯಾಚರಣೆಗಾಗಿ ಬಾಂಬ್ ಸ್ಕ್ಯಾಡ್ ಮತ್ತು ಶ್ವಾನದಳವನ್ನು ಉಪಯೋಗಿಸಲಾಗಿದೆ.
ನ್ಯಾಯಾಲಯದೊಳಗೆ ರಿಮೋಟ್ ಕಂಟ್ರೋಲ್ ಚಾಲಿತ ಐಇಡಿ ಬಾಂಬ್ ಇರಿಸಲಾಗಿದೆ ಎಂದೂ, ಗುರುವಾರ ಮಧ್ಯಾಹ್ನ 1ರಿಂದ 2 ಗಂಟೆಯೊಳಗಾಗಿ ಅದು ಸ್ಪೋಟಗೊಳ್ಳುವುದಾಗಿ ಇಮೇಲ್ ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು. ಈ ವಿಷಯ ಗಮನ ಬಂದ ನ್ಯಾಯಾಲಯದ ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಆ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ನ್ಯಾಯಾಲಯದ ಒಳಗೆ ಹಾಗೂ ಆವರಣದೊಳಗೆ ವ್ಯಾಪಕ ಶೋಧ ಆರಂಭಿಸಿದ್ದಾರೆ