ಮ.ನ.ಪಾ ವ್ಯಾಪ್ತಿಯ 50ನೇ ಅಳಪೆ ದಕ್ಷಿಣ ವಾರ್ಡಿನ ಪಡೀಲ್ ಕುಂದರ್ ಕುಟುಂಬಸ್ಥರ ದೈವಸ್ಥಾನ ಬಳಿ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯು ಶಾಸಕ ವೇದವ್ಯಾಸ್ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು.ಈ ವೇಳೆ ಮಾತನಾಡಿದ ಶಾಸಕರು ಇಲ್ಲಿ ತುರ್ತು ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಾ ರೀತಿಯಲ್ಲೂ ವಿಶೇಷ ಸಹಕಾರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಶೋಭಾ ಪೂಜಾರಿ, ವಿಜಯ್ ಕುಮಾರ್ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ಪ್ರವೀಣ್ ನಿಡ್ಡೇಲ್, ಭಾಸ್ಕರ್ ಚಂದ್ರ ಶೆಟ್ಟಿ, ಜಯಂತ್ ಪೂಜಾರಿ, ಜನಾರ್ಧನ್ ಕುಂದರ್ ಸರಿಪಳ್ಳ, ಸತೀಶ್ ಕುಂದರ್, ಸುನಿಲ್ ಕುಂದರ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.