
ಹೊಸಂಗಡಿ: ಬಡ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಿಡುಗಡೆಯಾದ ₹17 ಲಕ್ಷ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಆಡಳಿತ ಸಮಿತಿ ಹಾಗೂ ಅಧಿಕಾರಿಗಳ ವಿರುದ್ಧ ಬಿಜೆಪಿ ಸೋಮವಾರ ಪ್ರತಿಭಟನೆ ಮೆರವಣಿಗೆ ನಡೆಸಿತು.


ಹೊಸಂಗಡಿಯ ಬ್ಲಾಕ್ ಪಂಚಾಯತ್ ಕಚೇರಿಯತ್ತ ಸಾಗಿದ ಪ್ರತಿಭಟನಾಕಾರರನ್ನು ಕಚೇರಿ ಮುಂಭಾಗದಲ್ಲಿ ಪೊಲೀಸರು ತಡೆದರು.ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಣ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ಭ್ರಷ್ಟಾಚಾರಕ್ಕೆ ಬೆಂಬಲ ನೀಡಿರುವ ಬ್ಲಾಕ್ ಪಂಚಾಯತ್ ಅಧ್ಯಕ್ಷರು ರಾಜೀನಾಮೆ ನೀಡಬೇಕು. ಒಂದೇ ಖಾತೆಗೆ ₹17 ಲಕ್ಷ ವರ್ಗಾವಣೆ ಮಾಡಿರುವ ಟ್ರೆಷರಿ ಅಧಿಕಾರಿ ಹಾಗೂ ಚೆಕ್ಗೆ ಸಹಿ ಹಾಕಿರುವ ಅಧಿಕಾರಿಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿ, ಮುಸ್ಲಿಂ ಲೀಗ್ ಆಡಳಿತದಲ್ಲಿ ಪಂಚಾಯತ್ನಿಂದ ರಾಜ್ಯ ಸರ್ಕಾರದವರೆಗೆ ಭ್ರಷ್ಟಾಚಾರ ವ್ಯಾಪಿಸಿದೆ ಎಂದು ಆರೋಪಿಸಿದರು.

ಮುಖಂಡರಾದ ಮಣಿಕಂಠ ರೈ, ಪದ್ಮಾನಾಭ ಕಡಪರ, ಹರಿಶ್ಚಂದ್ರ ಎಂ, ವಿಕ್ರಂ ಪೈ, ಏ ಕೆ ಕಯ್ಯರ್, ಚಂದ್ರವತಿ ಶೆಟ್ಟಿ, ವಿದ್ಯಾ ಕುಮಾರಿ, ಜ್ಯೋತಿ ರೈ, ಕೆ ವಿ ಭಟ್, ಸದಾಶಿವ ಚೇರಲ್, ಪ್ರಸಾದ್ ರೈ ಮೊದಲಾದವುಗಳು ನೇತೃತ್ವ ನೀಡಿದರು

ಜನಪ್ರತಿನಿದಿನಗಳು ಉಪಸ್ಥಿತಿ ಹಾಗೂ ವಂಚನೆ ಗೆ ಒಳಗಾದ ಫಲನುಭವಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಯಾದವ ಬಡಾಜೆ ಸ್ವಾಗತಿಸಿ, ಯತೀರಾಜ್ ಶೆಟ್ಟಿ ವಂದಿಸಿದರು


