ಉಳ್ಳಾಲ ಸಯ್ಯದ್ ಮದನಿ ದರ್ಗಾಕ್ಕೆ ಎಸ್‌ಡಿಪಿಐ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಮೊಹಮ್ಮದ್ ಶಫಿ ರಾಜಸ್ಥಾನ್ ಭೇಟಿ

ಉಳ್ಳಾಲ: ಎಸ್ ಡಿ ಪಿಐ ಪಕ್ಷದ ನೂತನ ರಾಷ್ಟ್ರೀಯ ಕಾರ್ಯಧ್ಯಕ್ಷರಾಗಿ ಆಯ್ಕೆಯಾದ ಮೊಹಮ್ಮದ್ ಶಫಿ ರಾಜಸ್ಥಾನ್ ರವರು ಉಳ್ಳಾಲ ಸಯ್ಯದ್ ಮದನಿ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಗೈದರು.ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿ ವತಿಯಿಂದ ಎಸ್ ಡಿ ಪಿಐ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಮೊಹಮ್ಮದ್ ಶಫಿ ರಾಜಸ್ಥಾನ್ ರವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮೊಹಮ್ಮದ್ ಶಫಿ ರಾಜಸ್ಥಾನ್ ಮಾತನಾಡಿ ಇಸ್ಲಾಂ ಧರ್ಮ ಇಂದು ಉಳಿದಿರಲು ನಮ್ಮ ಪೂರ್ವಜರ ಕೊಡುಗೆ ಅಪಾರ ಆ ನಿಟ್ಟಿನಲ್ಲಿ ಅವರನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರು ಕಳಿಸಿಕೊಟ್ಟ ಸೌಹಾರ್ದತೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾದೆ ಎಂದು ಹೇಳಿದರು.

ಪ್ರ,ಕಾರ್ಯದರ್ಶಿಗಳಾದ ಮೊಹಮ್ಮದ್ ಅಶ್ರಫ್ ಮಂಗಳೂರು, ರಿಯಾಝ್ ಪರಂಗಿಪೇಟೆ, ಎಸ್ ಡಿಪಿ ಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ಎಸ್ ಡಿಪಿಐ ಮುಖಂಡರಾದ ರಿಯಾಝ್ ಕಡಂಬು, ಝಹೀದ್ ಮಲಾರ್,ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿ ಕಾರ್ಯದರ್ಶಿ ಮುಸ್ತಫಾ ಮದನಿನಗರ, ಕೋಶಾಧಿಕಾರಿ ನಝೀಮ್ ರಹ್ಮಾನ್ ಉಳ್ಳಾಲ್, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಪ್ರ.ಕಾರ್ಯದರ್ಶಿ ಇಮ್ತಿಯಾಝ್ ಪಿಲಾರ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!