ಮಂಗಳೂರು: ಅಸ್ತ್ರ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿಬಂದ ‘ಕಟ್ಟೆಮಾರ್’ ಸಿನಿಮಾದ ಅಧಿಕೃತ ಬಿಡುಗಡೆ ಕಾರ್ಯಕ್ರಮ ಶುಕ್ರವಾರ (ಜ.23) ನಗರದ ಬಿಗ್ ಸಿನಿಮಾಸ್‌ನಲ್ಲಿ ನಡೆಯಿತು.ಕಾರ್ಯಕ್ರಮವನ್ನು ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಟ್ಟೆಮಾರ್‌ನ ಮಣ್ಣಿನ ಸುವಾಸನೆ ಹಾಗೂ ದೈವಾನುಗ್ರಹದ ಹಿನ್ನೆಲೆಯ ಕಾರಣಿಕತೆಯನ್ನು ಪ್ರತಿಬಿಂಬಿಸುವ ಚಿತ್ರ ಇದಾಗಿದ್ದು, ಯುವ ನಿರ್ದೇಶಕರು ಅತ್ಯಂತ ಸಮರ್ಪಕವಾಗಿ ಸಿನಿಮಾವನ್ನು ರೂಪಿಸಿದ್ದಾರೆ ಎಂದು ಪ್ರಶಂಸಿಸಿದರು.
ಕಟ್ಟೆಮಾರ್ ಕ್ಷೇತ್ರದ ಮನೋಜ್ ಕಟ್ಟೆಮಾರ್ ಮಾತನಾಡಿ, ದೈವ ದೇವರ ಅನುಗ್ರಹ ಹಾಗೂ ನಂಬಿಕೆಯ ಹಿನ್ನೆಲೆಯ ಕಥೆಯನ್ನು ಸಿನಿಮಾದಲ್ಲಿ ಮನೋಜ್ಞವಾಗಿ ಹೆಣೆದಿದ್ದಾರೆ. ಚಿತ್ರಕ್ಕೆ ಎಲ್ಲರ ಆಶೀರ್ವಾದ ಸಿಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನವೀನ್ ಡಿ. ಪಡೀಲ್, ಪ್ರಕಾಶ್ ಪಾಂಡೇಶ್ವರ, ಕಿರಣ್ ಕುಮಾರ್ ಕೋಡಿಕಲ್, ರವಿ ರೈ ಕಳಸ, ಜೆ.ಪಿ. ತುಮಿನಾಡ್, ಲಂಚುಲಾಲ್ ಕೆ.ಎಸ್., ಶ್ರೀಧರನ್, ರೇಖಾ, ಸ್ವರಾಜ್ ಶೆಟ್ಟಿ, ನಮಿತಾ, ಜ್ಯೋತಿಷ್ ಶೆಟ್ಟಿ, ಅರ್ಜುನ್ ದೇವ್, ರೂಪಶ್ರೀ ವರ್ಕಾಡಿ ಹಾಗೂ ನಿರ್ದೇಶಕರಾದ ಸಚಿನ್ ಕಟ್ಲ, ರಕ್ಷಿತ್ ಗಾಣಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.