ಮಂಜೇಶ್ವರ: ಪಾವೂರು ಅಂಗನವಾಡಿಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ವಹಿಸಿದ್ದರು. ವರ್ಕಾಡಿ ಪಂಚಾಯತ್ ಸದಸ್ಯ ಸಿದ್ದಿಕ್ ಪಾವೂರು ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಸದಸ್ಯೆ ಬೀಪಾತಿಮ ಜಾವುರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಅಂಗನವಾಡಿಯ ಪುಟಾಣಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಮನ ಸೆಳೆದರು.
ಕಾರ್ಯಕ್ರಮದ ಆರಂಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಸೈಲಜಾ ಸ್ವಾಗತ ಭಾಷಣ ಮಾಡಿದ್ದು, ಸಹಾಯಕ ಕಾರ್ಯಕರ್ತೆ ಸುಚಿತ್ರ ವಂದನಾರ್ಪಣೆ ಸಲ್ಲಿಸಿದರು.