‘ಜೆನ್‌ಝಿ ಯುವಕರನ್ನು ಬೆದರಿಸಿ ಮೌನಗೊಳಿಸಲು ಸಾಧ್ಯವಿಲ್ಲ’ – ರಾಹುಲ್ ಗಾಂಧಿ

ನವದೆಹಲಿ: ಜೆನ್‌ಝಿ (Gen Z) ಯುವಕರನ್ನು ಬೆದರಿಕೆ ಹಾಕಿ ಅಥವಾ ಒತ್ತಡ ಹೇರುವ ಮೂಲಕ ಮೌನಗೊಳಿಸಲು ಸಾಧ್ಯವಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ Rahul Gandhi ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (X) ಮಾಡಿರುವ ಪೋಸ್ಟ್‌ನಲ್ಲಿ, “ಜೆನ್‌ಝಿ ಯುವಕರನ್ನು ಅಮಿತ್ ಶಾ ಮತ್ತು ನರೇಂದ್ರ ಮೋದಿ ಮೌನಗೊಳಿಸಲು ಸಾಧ್ಯವಿಲ್ಲ. ಮೊದಲು ಅವರ ಎಲುಬುಗಳನ್ನು ಮುರಿದರು. ಈಗ ಅವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸುತ್ತಿದ್ದಾರೆ. ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ಬಂಧಿಸುತ್ತಿದ್ದಾರೆ,” ಎಂದು ಅವರು ಆರೋಪಿಸಿದ್ದಾರೆ.

“ಮೋದಿ ಮತ್ತು ಅಮಿತ್ ಶಾ ಭಾರತದ ಭೂತಕಾಲ. ಜೆನ್‌ಝಿ ಯುವಕರೇ ಭಾರತದ ಭವಿಷ್ಯ. ದೇಶದ ಭವಿಷ್ಯದೊಂದಿಗೆ ವ್ಯವಹರಿಸುವಾಗ ಕೇಂದ್ರ ಸರ್ಕಾರ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು,” ಎಂದು ರಾಹುಲ್ ಗಾಂಧಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!