ಕುಂಬಳೆ : ಲೈಟಿಂಗ್ಸ್ ಕಾರ್ಮಿಕನಾಗಿದ್ದ ಯುವಕ ಆತ್ಮಹತ್ಯೆ

ಕುಂಬಳೆ: ರಾತ್ರಿ ಊಟ ಮಾಡಿ ಮಲಗಿದ್ದ ವ್ಯಕ್ತಿ ಮಲಗಿದ ಕೋಣೆಯಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ. ಕುಂಬಳೆ ಮಾವಿನಕಟ್ಟೆ ನಿವಾಸಿ, ಪೇಟೆಯ ಲೈಟ್ ಏಂಡ್ ಸೌಂಡ್ಸ್ ಸಂಸ್ಥೆಯ ನೌಕರ ನಿತಿನ್ ಕುಮಾರ್ ಗಟ್ಟಿ (25)ಎಂಬವರು ಆತ್ಮಹತ್ಯೆ ಮಾಡಿದವರಾಗಿದ್ದಾರೆ.

ರಾತ್ರಿ ಮಲಗಿದ ವ್ಯಕ್ತಿ ಬೆಳಗ್ಗೆ ಏಳದೇ ಇರುವುದನ್ನು ಗಮನಿಸಿ ಬಾಗಿಲು ಬಡಿದಾಗ ಪ್ರತಿಕ್ರಿಯೆ ಇಲ್ಲದಿರುವುದನ್ನು ನೋಡಿ ತಪಾಸಿಸಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿರುವುದು ಪತ್ತೆಯಾಯಿತು. ಕುಂಬಳೆ ಪೋಲೀಸರು ತಲುಪಿ ಮೃತದೇಹವನ್ನು ಕಾಸರಗೋಡು ಸರಕಾರಿ ಆಸ್ಪತ್ರೆಗೆ ಸಾಗಿಸಿ ಶವ ಮಹಜರು ನಡೆಸಿದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತರು ತಂದೆ ರಾಜೇಶ್ ಗಟ್ಟಿ, ತಾಯಿ ಸಾವಿತ್ರಿ, ಸಹೋದರಿಯರನ್ನು ಅಗಲಿದ್ದಾರೆ. ಮೃತ ವ್ಯಕ್ತಿ ಎಲ್ಲರೊಡನೆ ಸ್ನೇಹ ಬಾಂಧವ್ಯ ಇರಿಸಿಕೊಂಡವರಾಗಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!