ಮಂಜೇಶ್ವರ: ಮಂಜೇಶ್ವರ ಸರ್ಕಾರಿ ಹೋಮಿಯೋಪತಿ ಡಿಸ್ಪೆನ್ಸರಿಯಲ್ಲಿ ‘ಎನ್‌ಎಬಿಎಚ್’ ನ್ಯಾಷನಲ್ ಎಂಟ್ರಿ ಲೆವೆಲ್ ಸರ್ಟಿಫಿಕೇಶನ್ ಪಡೆಯುವ ನಿಟ್ಟಿನಲ್ಲಿ ಇನ್ಸ್‌ಪೆಕ್ಷನ್ (ಪರಿಶೀಲನೆ) ನಡೆಯಿತು.
ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಸೇವೆಯನ್ನು ಖಾತ್ರಿಪಡಿಸುವ ಈ ಮಹತ್ವದ ಪ್ರಕ್ರಿಯೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಅವರು ಉದ್ಘಾಟಿಸಿದರು.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಕಡಪ್ಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಎನ್‌ಎಬಿಎಚ್‌ನ ನ್ಯಾಷನಲ್ ಅಸೆಸ್ಸರ್ ಆಗಿ ಆಗಮಿಸಿದ್ದ ಡಾ. ಜಿತಿನ್ ಕೆ. ನಾಯರ್ ಅವರು ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವದ ಕುರಿತು ಮಾತನಾಡಿದರು.
ಡಿಸ್ಪೆನ್ಸರಿಯ ಕಾರ್ಯವೈಖರಿ ಮತ್ತು ಸೇವಾ ಗುಣಮಟ್ಟವನ್ನು ಅಭಿನಂದಿಸಿ ಪಂಚಾಯತ್ ಉಪಾಧ್ಯಕ್ಷೆ ಫಾತಿಮತ್ ಸಹುರಾ, ಎಫ್‌ಎಚ್‌ಸಿ ಮೆಡಿಕಲ್ ಆಫೀಸರ್ ಪ್ರಭಾಕರ ರೈ, ವಾರ್ಡ್ ಸದಸ್ಯರಾದ ಇಲ್ಯಾಸ್ ತೂಮಿನಾಡ್, ಬೇಬಿ ಲತಾ, ಖದೀಜ ಮೂಸಾ ಮತ್ತು ಅಬ್ದುಲ್ಲಾ ಗುಡ್ಡಕೇರಿ ಅವರು ಶುಭ ಹಾರೈಸಿದರು.
ಹೋಮಿಯೋಪತಿ ಡಿಸ್ಪೆನ್ಸರಿಯ ಮೆಡಿಕಲ್ ಆಫೀಸರ್ ಡಾ. ದೀಪ್ತಿ ಎಂ. ಅವರು ಸ್ವಾಗತಿಸಿದರು. ಡಾ. ಶಿಲ್ಪ ಎಂ.ವಿ. ಅವರು ವಂದನಾರ್ಪಣೆ ಸಲ್ಲಿಸಿದರು.