ಮಾರ್ಗ ದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ದಿ|| ಶ್ರೀ ವಸಂತ ಬೇಕಲ್ ರವರ ಸವಿನೆನಪಿಕಾಗಿ “ಮಾರ್ಗದೀಪ ಪ್ರೀಮಿಯರ್ ಲೀಗ್” ಕ್ರಿಕೆಟ್ ಟೂರ್ನಮೆಂಟ್,ಯು ಎ ಈ ಯ ಶಾರ್ಜಾದ NASS ಕ್ರಿಕೆಟ್ ಸ್ಟೇಡಿಯಂನಲ್ಲಿ ಅದ್ಧೂರಿಯಿಂದ ಜರುಗಿತು.
ಟೂರ್ನಮೆಂಟ್ ನಲ್ಲಿ ಶ್ರೀ ಮಂಜುನಾಥ ಕಾಸರಗೋಡು ಹಾಗೂ ಶ್ರೀ ದಾಮೋದರ ರಾವ್ ರವರ ಮಾಲೀಕತ್ವದ “ಗಡಿನಾಡು ಸ್ಟ್ರೈಕರ್”, ಶ್ರೀ ರಘುನಾಥ್ ಎಂ ಹಾಗೂ ಶ್ರೀ ಬಿಪಿನ್ ಚಂದ್ರ ನಾಯಕ ಮಾಲೀಕತ್ವದ “ಬೇಕಲ್ ಫೋರ್ಟ್ ರೈಡರ್ಸ್”, ಶ್ರೀ ಶ್ರೀಪತಿ ಕೆ ಹಾಗೂ ಶ್ರೀ ಕಮಲಾಕ್ಷ ಕೆ ಮಾಲೀಕತ್ವದ “ಕ್ಷತ್ರಿಯ ಲೆಜೆಂಡ್ಸ್” ಹಾಗೂ ಶ್ರೀ ನರೇಶ್ ಸಿ ಹೆಚ್ ಹಾಗೂ ಶ್ರೀ ಧನಂಜಯ ಸಿ ಹೆಚ್ ಮಾಲೀಕತ್ವದ “ಕೋಟೆ ಹೀರೋಸ್”ವೆಂಬ ನಾಲ್ಕು ತಂಡಗಳು ಭಾಗವಹಿಸಿದ್ದವು.
ಟೂರ್ನಮೆಂಟ್ ನ ಮುಖ್ಯ ಸಂಘಟಕರರಾಗಿ ಶ್ರೀ ಸುಧೀರ್ ಎಸ್ ಹಾಗೂ ಶ್ರೀ ಸುಬ್ರಹ್ಮಣ್ಯ ಬಿ ಕೆ ಯವರು ಕಾರ್ಯ ನಿರ್ವಹಿಸಿದರು.ಸಂಘದ ಅಧ್ಯಕ್ಷರಾದ ಶ್ರೀ ಮಹೇಶ್ ಚಂದ್ರಗಿರಿ, ಕಾರ್ಯದರ್ಶಿ ಶ್ರೀ ಸುನಿಲ್ ರಾವ್ ಹೇರೂರು, ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ಉಪ್ಪೂರು, ಕೋಶಾಧಿಕಾರಿಯಾದ ಶ್ರೀ ರಾಜೇಶ್ ರಾವ್, ಜೊತೆ ಕಾರ್ಯದರ್ಶಿ ಶ್ರೀ ಬಿಪಿನ ಚಂದ್ರ ನಾಯಕ ಹಾಗೂ ಕ್ರೀಡಾ ಕಾಯದರ್ಶಿ ಶ್ರೀ ಸುಬ್ರಹ್ಮಣ್ಯ ಬಿ ಕೆ ರವರು ಉಪಸ್ಥಿತರಿದ್ದರು.ಶ್ರೀ ಸುಗಂಧರಾಜ ಬೇಕಲ್ ರವರು ಸ್ವಾಗತಿಸಿದರು.ಶ್ರೀ ಅಜಿತ್ ಕೊರಕೋಡು ಹಾಗೂ ಶ್ರೀ ಸತೀಶ್ ಹಂಗಳೂರು ಮುಖ್ಯ ಸಲಹೆಗಾರರಾಗಿದ್ಹರು. ಶ್ರೀ ಹರಿಪ್ರಸಾದ್ ಕೋಟೆ ನಿರೂಪಕರಾಗಿದ್ಧರು.ಟೂರ್ನಮೆಂಟ್ ನ ಚಾಂಪಿಯನ್ಸ್ ತಂಡವಾಗಿ ಬೇಕಲ್ ಫೋರ್ಟ್ ರೈಡರ್ಸ್ ಹಾಗೂ ರನ್ನರ್ಸ್ ಅಪ್ ಆಗಿ ಕೋಟೆ ಹೀರೋಸ್ ತಂಡ ಹೊರಹೊಮ್ಮಿತು.