ಮಂಗಲ್ಪಾಡಿ : ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ.) ಮಂಗಲ್ಪಾಡಿ ಶಾಖೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ದಿನಾಂಕ 24/05/2026ನೇ ರವಿವಾರ ಬೆಳಿಗ್ಗೆ 10ಗಂಟೆಗೆ ಕುಬಣೂರು ಶ್ರೀ ರಾಮ ಎ.ಯು.ಪಿ.ಶಾಲಾ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹು ವಿಜ್ರಂಭಣೆಯಿಂದ ಜರುಗಿತು.ಮೊದಲಿಗೆ ಸಭಾ ಕಾರ್ಯಕ್ರಮವನ್ನು ಪ್ರೇಮಲತಾ ಬೊಳ್ಳಾರು ಮತ್ತು ಬಳಗದವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.ಶ್ರೀ ಬಾಲಕೃಷ್ಣ ಪಯ್ಯಾರ್ ಅತಿಥಿಯವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಈ ಸಭಾ ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಮಂಗಲ್ಪಾಡಿ ಶಾಖೆಯ ಅಧ್ಯಕ್ಷರಾದ ಶ್ರೀ ಸತೀಶ್ ಎಂ.ಹೇರೂರು ವಹಿಸಿದರು.ಶ್ರೀ ಶಂಕರ ಕುಂಜತ್ತೂರು ಇವರ ದಿವ್ಯ ಹಸ್ತದಿಂದ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.ಶ್ರೀಮತಿ ವನೀತ ರಾಜೇಶ್ ಕೊಂಡೆವೂರು ಇವರು ಶಾಖೆಯ ಒಂದು ವರ್ಷದ ಕಾರ್ಯಕ್ರಮ ಚಟುವಟಿಕೆಯ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಶ್ರೀ ಶ್ರೀನಿವಾಸ ಮೂಲ್ಯ ಮಯ್ಯರ ಮೂಲೆ ಮತ್ತು ಶ್ರೀ ಮುಂಡಪ್ಪ ಮೂಲ್ಯ ಮಯ್ಯರ ಮೂಲೆ ಇವರಿಗೆ ಗೌರವದಿಂದ ಕೃಷಿರತ್ನ ಬಿರುದು ನೀಡಿ ಸನ್ಮಾನಿಸಲಾಯಿತು.ಸನ್ಮಾನಿತರ ಪರಿಚಯವನ್ನು ಶ್ರೀಮತಿ ಸುಮತಿ ಟೀಚರ್ ನೆರವೇರಿಸಿದರು.ನಂತರ SSLCಯಲ್ಲಿ ಶ್ರೀಜೀತ.ಬಿ ಮತ್ತು PUCಯಲ್ಲಿ ಪ್ರೀಯಶ್ರೀ ಈ ವರ್ಷ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಗಣ್ಯರ ಸಮ್ಮುಖದಲ್ಲಿ ನೀಡಲಾಯಿತು.ಅದರೊಂದಿಗೆ ಮಂಗಲ್ಪಾಡಿ ಶಾಖೆಯ ಕನಸಿನ ಯೋಜನೆಯಾದ ಬೆಳಕು (ಬದುಕಿಗೊಂದು ಭರವಸೆಯ ಬೆಳಕು) ಯೋಜನೆಯಿಂದ ಶ್ರೀಮತಿ ವಾರಿಜ ಕುಲಾಲ್ ಬೇಕೂರು ಅವರು ಎರಡು ವರ್ಷದಿಂದ ರಕ್ತವಾತದಿಂದ ಬಳಳುತ್ತಿದ್ದು ಚಿಕಿತ್ಸೆಗಾಗಿ ತುಂಬಾ ಹಣ ಖರ್ಚಾಗಿದೆ,ಮುಂದಿನ ಚಿಕಿತ್ಸೆಗಾಗಿ ಇನ್ನೂ ಹೆಚ್ಚಿನ ಸಹಾಯ ಅವಶ್ಯಕವಾದ ಕಾರಣ ‘ಬೆಳಕು’ ಸಹಾಯಹಸ್ತ. ಇನ್ನೊಂದು ಸಹಾಯಹಸ್ತ ದಿ.ಸೋಮನಾಥ ಬೊಳ್ಳಾರು ನಮ್ಮ ಶಾಖೆಯ ಸದಸ್ಯರಾಗಿದ್ದು ಅವರು ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ನಿಧನರಾಗಿದ್ದರೆ ಇವರ ಬಡ ಕುಟುಂಬಕ್ಕೆ ಬೆಳಕು ಸಹಾಯಹಸ್ತವನ್ನು ಗಣ್ಯರ ಸಮ್ಮುಖದಲ್ಲಿ ನೀಡಲಾಯಿತು.
ಶ್ರೀ ಶಂಕರ ಕುಂಜತ್ತೂರು (ಗ್ರಾಮಾಧಿಕಾರಿ) ಇವರು ಉದ್ಘಾಟನಾ ಭಾಷಣದಲ್ಲಿ ಕುಂಬಾರಿಕೆಗೆ ಸರಕಾರದಿಂದ ಅನೇಕ ಸವಲತ್ತುಗಳು ದೊರೆಯುತ್ತದೆ ಆದರೆ ನಮ್ಮ ಈ ಕತೆಗಳನ್ನು ಸರಿಯಾದ ಸಮೀಕ್ಷೆ ನಡೆಯದ ಕಾರಣ ಮೊದಲು ಕುಂಬಾರಿಕೆ ಮಾಡುತ್ತಿದ್ದವರಿಗೆ ಯಾವುದೇ ಸವಲತ್ತುಗಳು ದೊರೆತ್ತಿಲ್ಲ ಅದಕ್ಕೆ ಕುಲಾಲ ಸಂಘ ಕುಂಬಾರಿಕೆ ಮಾಡುವವರನ್ನು ಗುರುತಿಸಿ ಅವರಿಗೆ ಸವಲತ್ತುಗಳು ಸಿಗುವಂತೆ ಮಾಡಬೇಕು,ನಮ್ಮ ಪಾರಂಪರಾಗತವಾಗಿ ಬಂದ ಧೈವರಾದನೆಗಳಾದ ಬದಲಾವಣೆಗಳು ಹಾಗೂ ಭೂಮಸೂದೆಯಿಂದಾಗಿ ಕೂಡು ಕುಟುಂಬಗಳು ಕಡಿಮೆಯಾಗುತ್ತಾ ಬಂತು.ಯುವ ಜನರಿಗೆ ಮಾರ್ಗದರ್ಶನ ನೀಡಬೇಕು ಸಾಂಸ್ಕೃತಿ ಸಂಸ್ಕಾರಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ಕುಶಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ (ತುಳು ಸಾಹಿತಿ) ಇವರು ನಮ್ಮ ಅಪ್ಪೆ ಭಾಷೆ ತುಳು ಭಾಷೆಯಾಗಿದೆ.ತುಳು ಭಾಷೆಯನ್ನು ನಾವು ಮಾತನಾಡಬೇಕು ಹಾಗೂ ಬೆಳೆಸಬೇಕು,ಮಕ್ಕಳಲ್ಲಿ ಹೆಚ್ಚಾಗಿ ತುಳು ಭಾಷೆಯನ್ನೇ ಮಾತಾಡಿಸಬೇಕು ಹಾಗೂ ಮಕ್ಕಳಲ್ಲಿ ನಮ್ಮ ಜಾತಿ ತುಳುನಾಡು ಮತ್ತು ಭಾಷೆಯ ಬಗ್ಗೆ ಪ್ರೀತಿ ಗೌರವ ಬೆಳೆಸಬೇಕು, ಅದರೊಂದಿಗೆ ಅದಷ್ಟು ಮಕ್ಕಳಿಗೆ ತುಳು ಲಿಪಿ ಕಲಿಸುವ ವ್ಯವಸ್ಥೆ ಮಾಡಬೇಕು ಎಂದರು ಹಾಗೂ ಅವರೇ ಬರೆದ ಕುಂಬಾರಿಕೆಯ ಬಗ್ಗೆಗಿನ ಸುಂದರವಾದ ಕವನ ವಾಚಿಸಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಶ್ರೀ ದಾಮೋದರ ಮಾಸ್ಟರ್ ಕಬ್ಬಿನಹಿತ್ತಿಲು(ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ) ಇವರು ಸಂಘಟನೆಯ ಅಭಿವೃದ್ಧಿಯ ಬಗ್ಗೆ ಮಾತನಾಡಿದರು.ಹಾಗೂ ಇನ್ನೋರ್ವ ಮುಖ್ಯ ಅತಿಥಿಯಾಗಿ ಶ್ರೀ ಬಾಲಕೃಷ್ಣ ಶೆಟ್ಟಿ ಮೀನಾರು(ಶಾಲಾ ಟ್ರಸ್ಟಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರು ಶ್ರೀರಾಮ ಎ.ಯು.ಪಿ.ಶಾಲೆ ಕುಬಣೂರು) ಇವರು ಕುಲಾಲ ಸಮುದಾಯದ ಮೇಲೆ ಇರುವ ಅಭಿಮಾನ ಹಾಗೂ ಅವರೊಂದಿಗಿದ್ದ ಒಡನಾಟಗಳ ಬಗ್ಗೆ ಮಾತನಾಡಿದರು.ಅದರೊಂದಿಗೆ ಹಿಂದೂ ಧರ್ಮದ ಒಂದು ಭಾಗವಾಗಿದೆ ಕುಲಾಲ ಸಮುದಾಯ,ಅದರಂತೆ ಎಲ್ಲಾ ಜಾತಿಗಳ ಅಭಿವೃದ್ಧಿಯಿಂದಲೇ ಹಿಂದೂ ಧರ್ಮವನ್ನು ಉಳಿಸಲು ಸದ್ಯ ಎಂದರು.ಹಾಗೂ ಈ ಸಭೆಯಲ್ಲಿಮಂಗಲ್ಪಾಡಿ ಶಾಖೆಯ ಗೌರವ ಸಲಹೆಗಾರರಾದ ಶ್ರೀ ಸೇಸಪ್ಪ ಮೂಲ್ಯ ಬೊಳ್ಳಾರು,ಹಾಗೂ ಗೌರವಾಧ್ಯಕ್ಷರಾದ ಶ್ರೀ ವಾಸು ಕುಲಾಲ್ ಬೊಳ್ಳಾರು ಉಪಸ್ಥಿತರಿದ್ದರು.ಹಾಗೂ ಮುಖ್ಯ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.ವ.ನಾರಾಯಣ ಕುಲಾಲ ಕುಬಣೂರು ವಂದನಾರ್ಪಣೆಗೈದರು ಎನ್.ಕೆ.ಕುಲಾಲ್ ಬೇಕೂರು ಕಾರ್ಯಕ್ರಮವನ್ನು ನಿರೂಪಿಸಿದರು.ಹಾಗೂ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.ಸಭಾಕಾರ್ಯಕ್ರಮದ ನಂತರ ಅನ್ನ ಸಂತರ್ಪಣೆ ನಡೆಯಿತು,ನಂತರ 2ಗಂಟೆಗೆ ಸಮುದಾಯದ ಪ್ರತಿಭಾನ್ವಿತರಿಂದ ಕುಲಾಲ ಕಲರವ ನೃತ್ಯ ಸಂಗೀತ ಕಾರ್ಯಕ್ರಮ ನಡೆಯಿತು,ಎಲ್ಲಾ ಪ್ರತಿಭೆಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.