ಮಂಜೇಶ್ವರ: ಕುಂಜತ್ತೂರು ಜಲಾಲಿಯ ಮಸೀದಿ ಪರಿಸರವಾಸಿ ಕುಂಜತ್ತೂರಿನ ಲೈಟ್ ಆಂಡ್ ಸೌಂಡ್ಸ್ ಸಂಸ್ಥೆಯ ನೌಕರ ಇಬ್ರಾಹಿಂ ಖಲೀಲ್ (32) ಎಂಬವರ ಮೇಲೆ ತಂಡವೊಂದು ಮಾರಕಾಯುಧ ಗಳಿಂದ ಹಲ್ಲೆಗೈದು ಗಂಭೀರ ಗಾಯಗೊಳಿಸಿದೆ.
ಜತೆಗೆ ಕೆಲಸ ನಿರ್ವಹಿಸುವ ಲತೀಫ್ ಎಂಬಾತನ ನೇತೃತ್ವದಲ್ಲಿ ತಂಡ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಗಾಯಗೊಂಡ ಇಬ್ರಾಹಿಂ ಖಲೀಲ್ರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಕುಂಜತ್ತೂರಿನಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ನಡೆದಿತ್ತು. ಈ ವೇಳೆ ಇಬ್ರಾಹಿಂ ಖಲೀಲ್ ಹಾಗೂ ಲತೀಫ್ ಮಧ್ಯೆ ವಾಗ್ವಾದವುಂಟಾಗಿತ್ತೆನ್ನಲಾಗಿದೆ. ಬಳಿಕ ಇಬ್ರಾಹಿಂ ಖಲೀಲ್ರನ್ನು ಇತರರು ಸಮಾಧಾನ ಪಡಿಸಿ ಮನೆಗೆ ಕಳುಹಿಸಿದ್ದಾರೆನ್ನಲಾಗಿದ್ದು, ಇವರು ಮನೆ ಸಮೀಪ ತಲುಪಿದಾಗ ಜತೆಗೆ ಕೆಲಸ ನಿರ್ವಹಿಸುವ ಲತೀಫ್ ನೇತೃತ್ವದಲ್ಲಿ ನಾಲ್ಕು ಮಂದಿ ತಲುಪಿ ಕಬ್ಬಿಣದ ಸರಳು ಮತ್ತಿತರ ಮಾರಕಾಯುಧಗಳಿಂದ ಇಬ್ರಾಹಿಂ ಖಲೀಲ್ರ ಮೇಲೆ ಹಲ್ಲೆಗೈದಿರುವುದಾಗಿ ದೂರಲಾಗಿದೆ.