ಫೆ.18 ರಿಂದ 24 : ಮಂಗಳೂರಿನ ಶಕ್ತಿನಗರದ ಮುತ್ತಪ್ಪ ಕ್ಷೇತ್ರದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ .. !

ಮಂಗಳೂರು:ಫೆ.18 ರಿಂದ 24 ರವರೆಗೆ ಮಂಗಳೂರಿನ ಶಕ್ತಿನಗರದ ಮುತ್ತಪ್ಪ ಕ್ಷೇತ್ರದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯರು ಹಾಗು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೆ. ಮೋನಪ್ಪ ಭಂಡಾರಿ ತಿಳಿಸಿದರು.ಮಂಗಳೂರಿನ ಪ್ರೆಸ್ ಕ್ಲಬ್ ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ.22 ರಂದು ಶಕ್ತಿನಗರದ ಮುತ್ತಪ್ಪ ಕ್ಷೇತ್ರದಲ್ಲಿ ತಂತ್ರಿ ಬ್ರಹ್ಮಶ್ರೀ ಪೂಂತೋಟತ್ತಿಲ್ ಪುಡವರ್ ಪರಮೇಶ್ವರನ್ ಅವರ ನೇತೃತ್ವದಲ್ಲಿ ವಿವಿಧ ವೈದಿಕ, ತಾಂತ್ರಿಕ, ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದರು .

ಫೆ.18 ರಂದು ಬೆಳಿಗ್ಗೆ 9 ಗಂಟೆಗೆ ಉಗ್ರಾಣದಲ್ಲಿ ಗಣಹೋಮ, ಸಾಯಂಕಾಲ 4 ಗಂಟೆಗೆ ಹಸಿರು ಹೊರೆಕಾಣಿಕೆ, ಸಾಯಂಕಾಲ 6.15 ಕ್ಕೆ ಉಗ್ರಾಣ ಉದ್ಘಾಟನೆ, 6.30 ಕ್ಕೆ ಕುಣಿತ ಭಜನೆ,6.45 ಕ್ಕೆ ದ್ವಾರ ಉದ್ಘಾಟನೆ ಮತ್ತು 7 ಗಂಟೆಗೆ ಧಾರ್ಮಿಕ‌ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಒಡಿಯೂರ್ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಬಿ ಸತೀಶ್ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 9 ಗಂಟೆಗೆ ಮಹಿಮೆದ ಮಂತ್ರದೇವತರ ಯಕ್ಷಗಾನ ನಡೆಯಲಿದೆ ಎಂದು ತಿಳಿಸಿದರು .

ಫೆ. 19 ರಂದು ಸಾಯಂಕಾಲ ಸಂಜೆ 5 ಗಂಟೆಗೆ ತಂತ್ರಿಗಳು ಮತ್ತು ವೈದಿಕ ಶ್ರೇಷ್ಠರ ಆಗಮನ ಆಚಾರ್ಯವರಣ ದೇವತಾ ಪ್ರಾರ್ಥನೆ, ಹೊಸ ದೇಗುಲ ಮತ್ತು ಮೂರ್ತಿಯನ್ನು ಸ್ವೀಕರಿಸುವುದು, ದೇಗುಲದ ಶುದ್ದೀಕರಣ ನಡೆಯಲಿದೆ . ಫೆ.20 ರಂದು ಸಾಯಂಕಾಲ ನೂತನ ಮೂರ್ತಿ ಜಲಧಿವಾಸ ನಡೆಯಲಿದೆ. ಫೆ. 22 ರಂದು ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರಾದ ಕಿಶೋರ್ ಕೊಟ್ಟಾರಿ, ಶಕೀಲಾ ಕಾವ, ಸುಮಾ ಶರಣ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!