ಛಲವಾದಿ ಟಿ.ನಾರಾಯಣಸ್ವಾಮಿ ವಿರುದ್ಧ ಅವಹೇಳನ ಆರೋಪ.ಶಾಸಕರ ವಿರುದ್ಧ ಕ್ರಮಕ್ಕೆ ಬಿಜೆಪಿ ಎಸ್ಸಿ ಮೋರ್ಚಾ ಆಗ್ರಹ.

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಕರ್ನಾಟಕ ಸರಕಾರದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಟಿ.ನಾರಾಯಣ ಸ್ವಾಮಿ ಅವರ ಬಗ್ಗೆ ಅವಹೇಳನ ಪದ ಬಳಕೆ ಮಾಡುವ ಮೂಲಕ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಮಾಡಿರುವ ಅವಮಾನ. ಈ ಕುರಿತು ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪರಿಶಿಷ್ಟ ಜಾತಿ ಸಮುದಾಯವನ್ನು ಸೇರಿಸಿ ಪ್ರತಿಭಟನೆ ಮಾಡುವ ಸ್ಥಿತಿ ತಲುಪಬಹುದು ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಮೂರು ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

ಛಲವಾದಿ ನಾರಾಯಣ ಸ್ವಾಮಿ ಅವರು ಪರಿಶಿಷ್ಟ ಜಾತಿಗೆ ಸೇರಿದ ನಾಯಕರಾಗಿದ್ದು, ಬಿಜೆಪಿ ಎಸ್.ಸಿ ಮೋರ್ಚಾದ ನಿಕಟಪೂರ್ವ ರಾಜ್ಯಾಧ್ಯಕ್ಷರಾಗಿದ್ದಾರೆ. ರಾಜ್ಯದ ಪರಿಶಿಷ್ಟ ಜಾತಿಯ ಮುಂಚೂಣಿಯ ನಾಯಕರೂ ಆಗಿದ್ದಾರೆ. ವಿಬಿ ಜಿರಾಮ್‌ಜಿ ಯೋಜನೆ ಕುರಿತು ಜನಜಾಗೃತಿ ಸಭೆಯ ಮೂಲಕ ಪಾದಯಾತ್ರೆಯಲ್ಲಿ ಪಕ್ಷದ ರಾಜ್ಯದ ಸೂಚನೆಯಂತೆ ಛಲವಾದಿಯವರು ಭಾಗವಹಿಸಿ ಮಾತನಾಡಿದ್ದಾರೆ. ಕಾಂಗ್ರೆಸ್‌ನ ಸುಳ್ಳಿನ ಬಟ್ಟೆಯನ್ನು ಬಿಚ್ಚುತ್ತೇನೆ ಎಂದು ಹೇಳಿರುವುದನ್ನು ಶಾಸಕರು ತನಗಾದ ಅವಮಾನವೆಂದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಶಾಸಕ ಅಶೋಕ್ ಕುಮಾ‌ರ್ ರೈ ಅವರು ಛಲವಾದಿ ಸಮುದಾಯಕ್ಕೆ ಅವಮಾನ ಮಾಡುವ ಭಾವನೆಯನ್ನು ಇಟ್ಟುಕೊಕಂಡು ಏಕವಚನದಲ್ಲಿ ಮಾತನಾಡಿದ್ದಾರೆ.

ಅಶೋಕ್ ಕುಮಾರ್ ರೈ ಅವರಿಗೆ ಅಧಿಕಾರದ ಮಧ ಏರಿರುವುದು ಕಂಡು ಬಂದಿದೆ. ನಾನು ನನ್ನಿಂದಲೇ ಎಂಬ ಅಹಂ ಭಾವವನನ್ನು ಶಾಸಕರು ಬೆಳೆಸಿಕೊಂಡಿದ್ದಾರೆ. ತಮ್ಮನ್ನು ರಾಜಕೀಯವಾಗಿ ವಿರೋಧಿಸಿದವರನ್ನು ವೈಯುಕ್ತಿಕವಾಗಿ ಮಾನ ಹಾನಿ ಮಾಡುವುದು ಶಾಸಕರ ಒಂದು ಚಾಳಿಯಾಗಿದೆ. ದೇವಸ್ಥಾನ, ದೈವಸ್ಥಾನಕ್ಕೆ ಬರುವಾಗ ಚಪ್ಪಲಿ ಹೇಗೆ ಹೊರಗಿಟ್ಟು ಬರುತ್ತಾರೋ ಹಾಗೆ ರಾಜಕೀಯ ಬಿಟ್ಟು ಬರಬೇಕೆಂದು ಹೇಳಿದ ಅವರೇ ಇವತ್ತು ದೇವಸ್ಥಾನದಲ್ಲಿ ರಾಜಕೀಯ ಮಾತನಾಡುತ್ತಾರೆ. ಹಾಗಾಗಿ ಶಾಸಕರು ತಮ್ಮ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಅಧಿಕಾರಿಗಳು ಈ ವಿಷಯನ್ನು ಗಂಭೀರವಾಗಿ ಪರಿಗಣಿಸಿ ಶಾಸಕರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ಅಗ್ರಹಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾದ ನಗರ ಮಂಡಲದ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು,ಬಿಜೆಪಿ ಎಸ್ಸಿ ಮೋಚಾ ಗ್ರಾಮಾಂತರ ಮಂಡಲದ ಅಧ್ಯಕ್ಷ ರೋಹಿತ್ ಅಮ್ಮಿನಡ್ಕ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾ‌ರ್ ಪಿ.ಬಿ, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್ ಚಾಕೋಟೆ, ಸುನಿಲ್ ದಡ್ಡು, ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಯುವರಾಜ್ ಪೆರಿಯತ್ತೋಡಿ, ವಿರೂಪಾಕ್ಷ ಭಟ್, ನಾಗೇಶ್ ಟಿ.ಎಸ್, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮೀ, ಶಶಿಧರ್ ನಾಯಕ್, ನಾಗೇಂದ್ರ ಬಾಳಿಗ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!