ಬಿಜೈ ಸ್ಮಾರ್ಟ್ ಬಜಾರ್‌ನಲ್ಲಿ ತುಳುನಾಡಿನ ಸಂಭ್ರಮ; ಆಟಿ ತಿಂಗಳ ಆಚರಣೆ

ಮಂಗಳೂರು: ತುಳುನಾಡಿನ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸುವ ಉದ್ದೇಶದಿಂದ ಬಿಜೈ ಮಂಗಳೂರಿನ ಸ್ಮಾರ್ಟ್ ಬಜಾರ್ ವತಿಯಿಂದ ಆಟಿ ತಿಂಗಳ ಆಚರಣೆಯನ್ನು ಆಯೋಜಿಸಲಾಯಿತು.


ಕಾರ್ಯಕ್ರಮದಲ್ಲಿ ತುಳುನಾಡಿನ ಸಂಪ್ರದಾಯಿಕ ಆಚರಣೆಗಳು, ಆಟಿ ತಿಂಗಳ ವಿಶೇಷತೆಗಳು ಹಾಗೂ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ಕಾರ್ಯಕ್ರಮಗಳು ನಡೆಯಿತು.


ಈ ಸಂದರ್ಭದಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಹಾರ ಪದಾರ್ಥಗಳು, ಆಟಿ ತಿಂಗಳ ವಿಶೇಷ ಖಾದ್ಯಗಳು ಹಾಗೂ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು.

ಮಹಿಳೆಯರಿಗಾಗಿ ಏರ್ಪಡಿಸಿದ ಈ ಕೂಟದಲ್ಲಿ ವಿವಿಧ ಮನೋರಂಜನೆ ಆಟ , ತುಳುನಾಡು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಛದ್ಮ ವೇಷ ,ಮನಸೂರೆಗೊಂಡಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಎನ್ ಮನೋಹರ್ ಕುಮಾರ್ ಮಂಗಳೂರು, ಶ್ರೀಮತಿ ಲಲಿತ ಉಪಾಧ್ಯಾಯ ಮಂಗಳಾದೇವಿಯವರು ಭಾಗವಹಿಸಿ ಶುಭ ಹಾರೈಸಿದರು .

ಶ್ರೀಮತಿ ಕುಸುಮ ನವೀನ್ ಕುಮಾರ್ ಕಾರ್ಯಕ್ರಮ ಸಂಯೋಜನೆ ಮಾಡಿದರು.


ಗ್ರಾಹಕರು ಹಾಗೂ ಸಾರ್ವಜನಿಕರು ಭಾಗವಹಿಸಿ ತುಳುನಾಡಿನ ಸಂಸ್ಕೃತಿಯ ಸೊಬಗನ್ನು ಸವಿದರು. ಸ್ಮಾರ್ಟ್ ಬಜಾರ್ ವತಿಯಿಂದ ಇಂತಹ ಕಾರ್ಯಕ್ರಮಗಳ ಮೂಲಕ ಸ್ಥಳೀಯ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!