ದೈವಾರಾಧನೆಯಲ್ಲಿ ಸಾಂಪ್ರದಾಯಿಕ ಕಟ್ಟು 🙏

ನಡುವೇಡಿಗುತ್ತು ಮನೆಯ ಜಾಗದ ನಾಗಬನದಲ್ಲಿ ಶ್ರೀ ನಾಗ, ರಕ್ತೇಶ್ವರಿ ಮತ್ತು ಗುಳಿಗ ದೈವಗಳ ತಂಬಿಲ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿದ್ರು ನನಗೆ ಹಗಲು ಹೊತ್ತು ಹೋಗಲು ಆಗದ ಕಾರಣ ಸಂಜೆ ಹೊತ್ತು ಹೋಗಿದ್ದೆ, ಅಲ್ಲಿ ಅವರ ಸಾಂಪ್ರದಾಯಕ, ದೈವ ಕಟ್ಟು ಗಳನ್ನು ನೋಡಿ ನಾನು ಪುನೀತನಾದೆ 🙏

ಏನೆಂದರೆ…

ಒಂದು ತರವಾಡು ಅಥವಾ ಕುಟುಂಬ ದೈವಗಳ ಕಾರ್ಯವನ್ನು ತಮ್ಮ ಕುಟುಂಬದ ಹಿರಿಯ ವಕ್ತಿಗಳ ನಿರ್ದೇಶನ ಪ್ರಕಾರ ಹಿರಿಯರು ಕಿರಿಯರು ಸೇರಿ ಮಾಡುವುದು ಪದ್ಧತಿ, ಅದೇ ಪ್ರಕಾರ ಇಲ್ಲಿ ನಾನು ನೋಡಿದೆ, ಅದಲ್ಲದೆ, ದೈವಗಳ ತಂಬಿಲ & ಅಗೆಲ್ ಸೇವೆಗೆ ಕುಟುಂಬದ ಹಿರಿಯ ಹೆಂಗಸರು, ( ತಿಂಗಳ ಮುಟ್ಟು ನಿಂತವರು) ಇಲ್ಲಿ ಅಡುಗೆ ತಯಾರಿಯಲ್ಲಿ ಇದ್ದರು, ಅದಲ್ಲದೆ ಸಾಂಪ್ರದಾಯಿಕವಾದ ಮಣ್ಣಿನ ಮಡಕೆ, ಅರೆಯುವ ಕಲ್ಲು, ಒಲೆ, ಇದನೆಲ್ಲ ನೋಡಿದಾಗ ನಿಜವಾದ ದೈವರಾಧನೆಯ ಕಟ್ಟು ಅಂತ ಹೇಳಲು ಹೆಮ್ಮೆ ಪಡಬೇಕು, ದೇಶ ಎಷ್ಟೇ ಮುoದುವರಿಯಲಿ, ಆದ್ರೆ ದೈವರಾಧನೆ ಎಂಬುದು ಅದರ ಕಟ್ಟು ಪ್ರಕಾರ ಇರಬೇಕು, ನಮಗೆ ಎಷ್ಟೇ ಅಂತಸ್ತು ಆಸ್ತಿ ಬಂದ್ರೂ ದೈವ ಕಟ್ಟಲೆಯನ್ನು ನಾವು ಮರೀಬಾರ್ದು ಎಂಬುದಕ್ಕೆ ಸಾಕ್ಷಿಯಾಯಿತು.

ನಾವು ಏನೇ ಮಾಡುವುದಿದ್ರು ಅದು ದೈವಗಳಿಗೆ, ಆಮೇಲೆ ಅದು ನಮಗೆ, ಅನ್ನುವ ಮನೋ ಭಾವನೆ ಆ ಕುಟುಂಬಸ್ತರಲ್ಲಿ ಇತ್ತು, ಯಾವುದೇ ಗತ್ತು ಗಾಂಭೀರ್ಯ ಅವರಲ್ಲಿ ಇರಲಿಲ್ಲ, ನಾನು ತುಂಬಾ ಹೊತ್ತು ನಿಲ್ಲುವುದಿಲ್ಲ ಅಂತ ಹೇಳುವಾಗಲೇ ಒಂದು ಸಿಯಾಳ ನನ್ನ ಕೈಗೆ ಕೊಟ್ರು, ಸಂತೋಷದಿಂದ ಸ್ವೀಕರಿಸಿದೆ.

ನಾನು ಕೂಡ ದೈವ ಭಕ್ತ ಮತ್ತು ಆಯುಧ ಹಿಡಿಯುವ ವ್ಯಕ್ತಿ ಅಲ್ಲಿಯ ವಾತಾವರಣ ನೋಡುವಾಗ ಅಲ್ಲಿ ದೈವ ಕಳೆ ಎದ್ದು ಕಾಣುತಿತ್ತು. ಅಲ್ಲಿನ ವ್ಯವಸ್ಥಾಪಕರು ಆದಂತಹ ಶ್ರೀ ಜಯರಾಮ್ ಶೆಟ್ಟಿ (ವಸಂತ) ಇವರಿಗೆ ಅಭಿನಂದನೆಗಳು, ಅವರು ಅಲ್ಲಿನ ಎಲ್ಲಾ ಕಾರ್ಯಗಳಲ್ಲಿ ಮುಂದೆ ನಿಂತು, ಮೇಲ್ನೋಟ ವಹಿಸಿ, ಮಾಡುತ್ತಾರೆ, ದೈವರಾಧನೆಯಲ್ಲಿ ಆಡಂಬರಕ್ಕಿಂತ ಸಂಪ್ರದಾಯದ ಕಟ್ಟು ಮುಖ್ಯ ಅಂತ ಈ ಜಾಗದಲ್ಲಿ ತೋರಿಸಿಕೊಟ್ಟಿದ್ದಾರೆ, ನಂಬಿಕೆ, ಭಯ, ಭಕ್ತಿ,, ಒಗ್ಗಟ್ಟು, ಇದ್ದರೆ ಮನಸಿಗೆ ನೆಮ್ಮದಿ ಇರುತ್ತದೆ, ಈ ಒಗ್ಗಟ್ಟನ್ನು ಒಂದು ಮಾಡಬೇಕಾದರೆ ಬಹಳ ಕಷ್ಟದ ಕೆಲಸ, ಆದ್ರೆ ಇಲ್ಲಿ ಎಲ್ಲರನ್ನು ಒಂದು ಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 🙏

ಏನೇ ಅಗಲಿ ದೈವಾರಧನೆಯ ಸಾಂಪ್ರದಾಯಿಕ ಕಟ್ಟು ಉಳಿಯಲಿ 🙏

ವಂದನೆಗಳೊಂದಿಗೆ 🙏

❣️ಸ್ನೇಹಜೀವಿ❣️

✍️ಬರಹ :-ಉದಯಮಲ್ಲಿ ಅಮ್ಮ್ಚಿ ಕೆರೆ ಬೆದ್ರಡ್ಕ, ಸಿರಿಬಾಗಿಲು ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!