ಬಲ್ಲಂಗುಡೆಲು ಗೆಳೆಯರ ಬಳಗ 34ನೇ ವಾರ್ಷಿಕೋತ್ಸವ ಮಾ.2 ,3 ರಂದು

ಮಂಜೇಶ್ವರ : ಗೆಳೆಯರ ಬಳಗ (ರಿ) ಬಲ್ಲಂಗುಡೆಲು ಪಟ್ಟತ್ತಮೊಗರು ಮಜಿಬೈಲು ಇದರ 34 ನೇ ವರ್ಷದ ವಾರ್ಷಿಕೋತ್ಸವವು ಮಾ.2 ಮತ್ತು ಮಾ.3 ರಂದು ಬಲ್ಲಂಗುಡೆಲು ಶ್ರೀ ಪಾಡಂಗರೆ ಭಗವತಿ ಕ್ಷೇತ್ರದ ವಠಾರದಲ್ಲಿ ಜರಗಲಿದೆ.

ಮಾ.2 ರಂದು ಸಂಜೆ 7ಕ್ಕೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ಹಾಗೂ ಖ್ಯಾತ ಗಾಯಕ ರಂಜೀತ್ ಮೊಗರು ತಂಡದವರಿಂದ ಸಂಗೀತ ಸಂಜೆ ನಡೆಯಲಿದೆ.

ಮಾ.3 ರಂದು ಸಂಜೆ 5.30ಕ್ಕೆ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ಸಂಘದ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!