ಮಂಗಳೂರು:ಸೀರೆ ಬೇಕೇ ಸೀರೆ ಎನ್ನುವ ಹಾಗೆ ಕಾಣ್ತಾ ಇದೆ ಬುದ್ಧಿವಂತರ ಜಿಲ್ಲೆಯ ಈ ಒಂದು ಸ್ಪಾಟ್. ಹೌದು ಅಷ್ಟಕ್ಕೂ ಈ ಇಂಟ್ರೆಸ್ಟಿಂಗ್ ವಿಷಯ ವಸ್ತು ಅಡಗಿರುವುದು ರೈಲ್ವೇ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಎನ್ನುವುದು ಕಟು ಸತ್ಯ . ವಿಶ್ವ ವಿದ್ಯಾಲಯ ಕಾಲೇಜು ಹಂಪನಕಟ್ಟೆ ಗ್ರಂಥಾಲದ ಸನಿಹ ಇರುವ ಮಾರ್ಗದ ಬದಿಯು ಈ ಮೊದಲು ಹೆಚ್ಚಾಗಿ ಕಸದ ರಾಶಿಯಿಂದಲೇ ತುಂಬಿರುತ್ತಿತ್ತು .
ಇದು ಆ ಮಾರ್ಗವಾಗಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಕಿರಿ ಕಿರಿಯನ್ನು ದುರ್ವಾಸನೆಯಿಂದ ಮೂಗು ಮುಚ್ಚಿ ಹೋಗುವಂತೆ ಮಾಡುತ್ತಿತ್ತು . ಆದರೆ ಆ ಬಳಿಕ ಗಂಭೀರವಾಗಿ ಈ ಸಮಸ್ಯೆಯನ್ನು ಗಮನಿಸಿದ ಮಂಗಳೂರು ಮಹಾ ನಗರ ಪಾಲಿಕೆಯು ಆ ಪ್ರದೇಶಕ್ಕೆ ಕಸ ಹಾಕದಂತೆ ಬೇಲಿ ಹಾಕಿ ಇದು ನನ್ನ ನಗರ ಸ್ವಚ್ಛತೆ ಕಾಪಾಡುವುದು ನನ್ನ ಧರ್ಮ ಎಂದು ಬೋರ್ಡನ್ನು ಹಾಕಿತ್ತು .
ಕೆಲವು ದಿನಗಳ ತನಕ ಎಲ್ಲವು ಸರಿಯಾಗಿತ್ತು .ಅಲ್ಲಿ ಯಾವುದೇ ಕಸದ ರಾಶಿಗಳು ಕಂಡು ಬಂದಿರಲಿಲ್ಲ ಆದರೆ ಇದೀಗ ನಾಯಿ ಬಾಲ ಡೊಂಕು ಎಂಬತ್ತೆ ಅಲ್ಲಿ ಮತ್ತೆ ಅಲ್ಲಿ ಕಸದ ರಾಶಿ ಉಲ್ಬಣವಾಗಿದೆ. ಕಸ ಬಿಸಾಡಬೇಡಿ ಎಂದು ದಪ್ಪ ಅಕ್ಷರದಲ್ಲಿ ನಾಗರಿಕರಿಗೆ ನಿರ್ದೇಶನವನ್ನು ನೀಡಿದ್ದರು ಸಹ ಇದನ್ನು ಗಾಳಿಗೆ ತೂರಿದ್ದಾರೆ.ಇದೀಗ ಅಲ್ಲಿ ಸೀರೆಗಳ ಮೂಟೆಯೇ ಇದೆ .
ಗಿರೀಶ್ ಪಿ ಎಂ