ಕಾಸರಗೋಡಿನಲ್ಲಿ ಬಾಲಗೋಕುಲ ವಾರ್ಷಿಕ ಮಹಾಸಭೆಗೆ ಚಾಲನೆ

ಕಾಸರಗೋಡು: ಬಾಲಗೋಕುಲ ವಾರ್ಷಿಕ ಮಹಾಸಭೆಗೆ ಕಾಸರಗೋಡಿನಲ್ಲಿ ಭಾನುವಾರ ಚಾಲನೆ ದೊರೆಯಿತು. ಕೇಂದ್ರ ಸಚಿವ ಶ್ರೀಪಾದ್ ಯಶೋ ನಾಯಕ್ ಮಹಾಸಭೆಯನ್ನು ಉದ್ಘಾಟಿಸಿದರು. ಉತ್ತರ ಕೇರಳ ರಾಜ್ಯಾಧ್ಯಕ್ಷ ಎಂ. ಸತ್ಯನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಸಿ. ಸದಾನಂದನ್ ಮಾಸ್ಟರ್, ಸಂಸದರು ಭಾಗವಹಿಸಿದರು. ಕೊಂಡೆಯೂರು ನಿತ್ಯಾನಂದ ಯೋಗಾಶ್ರಮದ ಸ್ವಾಮಿ ಯೋಗಾನಂದ ಸರಸ್ವತಿ ಆಶೀರ್ವಚನ ನೀಡಿದರು. ಬಾಲಗೋಕುಲಂ ರಾಜ್ಯಾಧ್ಯಕ್ಷ ಆರ್. ಪ್ರಸನ್ನಕುಮಾರ್ ಮುಖ್ಯ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ವರ್ಕಿಂಗ್ ಚೇರ್ಮನ್ ನಿವೃತ್ತ ಎಸ್‌ಪಿ ಹರಿಶ್ಚಂದ್ರ ನಾಯಕ್, ಬಾಲಸಾಹಿತಿ ಪ್ರಕಾಶನ ಚೇರ್ಮನ್ ಪಿ.ಕೆ. ವಿಜಯರಾಘವನ್, ಕಾಞಂಗಾಡು ಜಿಲ್ಲಾ ಬಾಲಸಮಿತಿ ಅಧ್ಯಕ್ಷೆ ಆರ್ಯಾನಂದ ಸೇರಿದಂತೆ ಹಲವು ಗಣ್ಯರು ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಂ. ಸದಾನಂದನ್ ವಾರ್ಷಿಕ ವರದಿ ಮಂಡಿಸಿದರು.

ಸ್ವಾಗತ ಸಮಿತಿಯ ಅಧ್ಯಕ್ಷ ಸಿ.ವಿ. ಪೊದುವಾಳ್ ಸ್ವಾಗತಿಸಿದರು. ಪ್ರಧಾನ ಸಂಚಾಲಕ ರಾಜೇಂದ್ರ ಮೊವಾರ್ ವಂದಿಸಿದರು. ಬಳಿಕ ನಡೆದ ಪ್ರತಿನಿಧಿ ಸಭೆಯಲ್ಲಿ ಪಿ.ಎಂ. ಶ್ರೀಧರನ್ ಮಾಸ್ಟರ್ ನಿರ್ಣಯ ಮಂಡಿಸಿದರು. ಯು. ಪ್ರಭಾಕರನ್ ಮಾಸ್ಟರ್, ರಾಜ್ಯ ಉಪಾಧ್ಯಕ್ಷ ಎನ್.ವಿ. ಪ್ರಜಿತ್ ಮಾಸ್ಟರ್ ಹಾಗೂ ಸಂಘಟನಾ ಕಾರ್ಯದರ್ಶಿ ಎಸ್.ಆರ್. ಕಣ್ಣನ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಾರ್ಷಿಕ ಮಹಾಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪ್ರತಿನಿಧಿಗಳು ಭಾಗವಹಿಸಿ ಸಂಘಟನೆಯ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!