ಕುಂಬಳೆ: ವೖಬ್ 4 ವೖಲ್ಸ್ ಹೆಲ್ತ್ ಕೇರಳ ಅಭಿಯಾನ ವಾಹನ ಪ್ರಚಾರಕ್ಕೆ ಶುಕ್ರವಾರ ಬೆಳಿಗ್ಗೆ ಕುಂಬಳೆ ಗ್ರಾ. ಪಂ. ನಲ್ಲಿ ಸ್ವಾಗತ ನೀಡಲಾಯಿತು. ಕೇರಳ ಸರಕಾರ ಕಾಸರಗೋಡು ಜಿಲ್ಲೆಯಲ್ಲಿ ಅನುಷ್ಟಾನಕ್ಕೆ ತಂದ ಆರೋಗ್ಯ ಯೋಜನೆ ಮತ್ತು ಸೌಲಭ್ಯಗಳ ಪ್ರಚಾರದಂಗವಾದ ವಾಹನ ಪ್ರಚಾರ ಕುಂಬಳೆ ಗ್ರಾ. ಪಂ. ಅಂಗಣಕ್ಕೆ ಪ್ರವೇಶಿಸಿದಾಗ ಸ್ವಾಗತ ನೀಡಿ ಪಂ. ಅಧ್ಯಕ್ಷ ವಿ. ಪಿ. ಅಬ್ದುಲ್ ಖಾದರ್ ಉದ್ಘಾಟಿಸಿದರು.
ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಪಿ. ಖಾಲಿದ್ ಬಂಬ್ರಾಣ ಅಧ್ಯಕ್ಷತೆ ವಹಿಸಿದರು. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಎ. ಕೆ. ಆರಿಫ್, ಬ್ಲಾಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಶುಭಾಸಂಸನೆ ಸಲ್ಲಿಸಿದರು. ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ ಆದೇಶ್ ಎಂ. ವಿ ಹೆಲ್ತ್ ಕೇರಳ ಅಭಿಯಾನದ ಕುರಿತು ಮಾತನಾಡಿದರು.ಬ್ಲಾಕ್ ಮೆಡಿಕಲ್ ಆಫೀಸರ್ ಕೃಷ್ಣ ಪ್ರಸಾದ್ ಸ್ವಾಗತಿಸಿ, ಪಿಆರ್ ಒ ಸಂತೋಷ್ ಕುಂಬ್ಳೆ ವಂದಿಸಿದರು.
ಬಳಿಕ ಆರಿಕ್ಕಾಡಿ ಕುಟುಂಬ ಆರೋಗ್ಯ ಕೇಂದ್ರದಲ್ಲಿ ವಾಹನ ಪ್ರಚಾರ ಅಭಿಯಾನಕ್ಕೆ ಸ್ವಾಗತ ನೀಡಲಾಯಿತು. ಕುಟುಂಬ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಸಂಧ್ಯಾ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಹಾಲಿ ಫ್ಯಾಮಿಲಿ ಶಾಲೆ ಕುಂಬಳೆ ಇಲ್ಲಿನ ವಿದ್ಯಾರ್ಥಿಗಳು ಆರೋಗ್ಯ ನಾಟಕ ಪ್ರದರ್ಶಿಸಿದರು. ಜೂನಿಯರ್ ಹೆಲ್ತಾ ಇನ್ಸ್ಪೆಕ್ಟರ್ ರೆಹ್ನಾ, ಜೂನಿಯರ್ ಪಬ್ಲಿಕ್ ಹೆಲ್ತ್ ನರ್ಸ್ ಅಷಿತಾ, ಸವಿತ, ನರ್ಸಿಂಗ್ ಆಫೀಸರ್ ಹೀರಾ, ಎಂಎಲ್ ಎಸ್ ಪಿ ಸಿಬಂದಿಗಳಾದ ಆರತಿ, ದೀಪಾ, ಜಸೀತಾ, ದಿವ್ಯಾ, ಲ್ಯಾಬ್ ಟೆಕ್ನೀಷಿಯನ್ ಷಾಯಿಫ್ ಶುಭಾಶಂಸನೆ ಮಾಡಿದರು. ಸಾರ್ವಜನಿಕರು, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡರು.