ಉದ್ಯಾವರ ಮಾಡ ಬಳಿ ಹೆದ್ದಾರಿಯಲ್ಲಿ ಫುಟ್ ಓವರ್ ಬ್ರಿಡ್ಜ್ ಸ್ಥಾಪನೆಗೆ ಸಾರ್ವಜನಿಕರ ಮನವಿ

ಮಂಜೇಶ್ವರ: ಉದ್ಯಾವರ ಮಾಡ ಪರಿಸರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಚಾರಿಗಳ ಸುರಕ್ಷತೆಗೆ ಫುಟ್ ಓವರ್ ಬ್ರಿಡ್ಜ್ ಸ್ಥಾಪಿಸಬೇಕೆಂದು ಸ್ಥಳೀಯರು ಆಗ್ರಹಿಸಿ, ಕೆ. ಸುರೇಂದ್ರನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸ್ಥಳೀಯರಾದ ತಿಮೀರಿ ಬೆಳ್ಚ್ಪಪಾಡ ಮತ್ತು ಸಂಜೀವ ಶೆಟ್ಟಿ ಅವರು ಸಾರ್ವಜನಿಕರ ಪರವಾಗಿ ಮನವಿ ಸಲ್ಲಿಸಿ, ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರದಿಂದ ಪಾದಚಾರಿಗಳಿಗೆ ಅಪಾಯ ಉಂಟಾಗುತ್ತಿರುವುದರಿಂದ ತಕ್ಷಣವೇ ಫುಟ್ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ನೇತಾರರಾದ ವಿಜಯ್ ಕುಮಾರ್ ರೈ, ಆದರ್ಶ ಬಿ.ಎಂ., ಹರಿಶ್ಚಂದ್ರ ಎಂ. ಯಾದವ ಬಡಾಜೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಸ್ಥಳೀಯರ ಸುರಕ್ಷತೆಯ ಹಿತದೃಷ್ಟಿಯಿಂದ ಸಂಬಂಧಿತ ಇಲಾಖೆಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!