ಹಿಂದೂ ಸಮಾಜೋತ್ಸವ ಬೈಕ್ ರ್ಯಾಲಿಗೆ ತಡೆ ಕೋರಿ ಸಿಪಿಐಎಂ ಮನವಿ.ಸಾಮಾಜಿಕ ಸಾಮರಸ್ಯ ಭಂಗದ ಆತಂಕ; ಜಿಲ್ಲಾ ಪೊಲೀಸ್ ವರಿಷ್ಟರಿಗೆ ಅರ್ಜಿ ಸಲ್ಲಿಕೆ

ಕಾಸರಗೋಡು: ವಿದ್ಯಾನಗರದಲ್ಲಿ ಮಾ. 1ರಂದು ಆಯೋಜಿಸಲಾದ ಹಿಂದೂ ಸಮಾಜೋತ್ಸವದಂಗವಾದ ಬೈಕ್ Rally ಗೆ ಅನುಮತಿ ನಿಷೇಧಿಸುವಂತೆ ಒತ್ತಾಯಿಸಿ ಸಿಪಿಐಎಂ ಕಾಸಗೋಡು ಏರಿಯಾ ಸಮಿತಿ ಜಿಲ್ಲಾ ಪೊಲೀಸ್ ವರಿಷ್ಟರಿಗೆ ಮನವಿ ಸಲ್ಲಿಸಿದೆ. ಅನ್ಯಮತೀಯರು ಮತ್ತು ಅನ್ಯ ರಾಜಕೀಯ ಬೆಂಬಲಿಗರ ಬಾಹುಳ್ಯ ಉಳ್ಳ ಪ್ರದೇಶದಲ್ಲಿ ಬೈಕ್ ಮೆರವಣಿಗೆ ನಡೆಸಿ, ಸಂಘರ್ಷ ಸೃಷ್ಟಿಸಿ ನಾಡಿನ ಸಾಮಾಜಿಕ ಸಾಮರಸ್ಯತೆಯ ಐಕ್ಯತೆಯನ್ನು ಶಿಥಿಲಗೊಳಿಸಲು ಗೂಢ ಸಂಚಿನೊಂದಿಗೆ ಬೈಕ್ ಮೆರವಣಿಗೆ ಏರ್ಪಡಿಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟರಿಗೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಲಾಗಿದೆ.

ಹಿಂದೂ ಸಮಾಜೋತ್ಸವದಂಗವಾಗಿ ಏರ್ಪಡಿಸಿದ ಬೖಕ್ ಮೆರವಣಿಗೆ ನೆಲ್ಲಿಕಟ್ಟೆ, ಚೆರ್ಕಳ, ಆಲಂಪಾಡಿ, ಚೆಂಗಳ, ನಾಯಮ್ಮಾರಮೂಲೆ ದಿರಿಯಲ್ಲಿ ಹಾದುಹೋಗಲಿದೆ. ಇದು ಅಲ್ಪಸಂಖ್ಯಾತ ಬಾಹುಳ್ಯ ಮತ್ತು ಇತರ ಮತೀಯರೆಲ್ಲರೂ ಬದುಕುವ ಪ್ರದೇಶ. ಈ ಭಾಗದಲ್ಲಿ ಮೆರವಣಿಗೆ ನಡೆಸಿ ಕೋಮು ಸಾಮರಸ್ಯ ಕೆಡಿಸುವ, ಸಂಘರ್ಷಕ್ಕೆ ಪ್ರಚೋದಿಸುವ ಉದ್ದೇಶದಲ್ಲಿ ಬೖಕ್ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಸಿಪಿಎಂ ದೂರಿದೆ. ಆದ್ದರಿಂದ ಸದ್ಯ ಸಾಮರಸ್ಯ ಮತ್ತು ಶಾಂತಿಯಿಂದ ಜನಜೀವನ ನಡೆಯುವ ಪ್ರದೇಶದಲ್ಲಿ ಗಲಭೆ ಸೃಷ್ಟಿಗೆ ಅವಕಾಶ ನೀಡದಂತೆ ತಡೆಯಬೇಕೆಂದು ಜಿಲ್ಲಾ ಪೋಲೀಸ್ ಮೇಧಾವಿಗೆ ಸಿಪಿಎಂ ಕಾಸರಗೋಡು ಏರಿಯಾ ಸೆಕ್ರೆಟರಿ ಟಿ. ಎಂ. ಕೆ ಕರೀಂ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!