ತಾಲೂಕು ಮಟ್ಟದಲ್ಲಿ ನ್ಯಾಯಾಲಯ ಗಳನ್ನು ಪ್ರಾರಂಭಿಸಿ ಶೀಘ್ರ ನ್ಯಾಯದಾನ ನೀಡಬೇಕು ಎನ್ನುವುದು ನ್ಯಾಯಾಂಗ ವ್ಯವಸ್ಥೆಯ ಆಶಯವಾಗಿದೆ. ಈ ನಿಟ್ಟಿನಲ್ಲಿ ಕಕ್ಷಿದಾರರಿಗೆ ಶೀಘ್ರ ನ್ಯಾಯ ದಾನ ಒದಗಿಸಲು ಎಲ್ಲ ವಕೀಲರು ಹಾಗೂ ನಾವು ಶ್ರಮಿಸುಬೇಕಾಗಿದೆ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾ ಲಯದ ನ್ಯಾಯಾಧೀಶ ಬಸವರಾಜ್ ಹೇಳಿದರು.
ಕಡಬ ಗಣೇಶ್ ಬಿಲ್ಡಿಂಗ್ನಲ್ಲಿ ಪ್ರಾರಂಭವಾದ ಪುತ್ತೂರು ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಕಡಬ ಸಂಚಾರಿ ನ್ಯಾಯಾಲಯವನ್ನು ಅವರು ಮಂಗಳವಾರ ಉದ್ಘಾಟಿಸಿ ಮಾತ ನಾಡಿದರು.
ಗ್ರಾಮೀಣ ಪ್ರದೇಶವಾದ ಕಡಬ ದಿಂದ ಪುತ್ತೂರು ಹಾಗೂ ಸುಳ್ಯ ನ್ಯಾಯಾಲಯ ಗಳಿಗೆ 40ರಿಂದ 45 ಕಿ.ಮೀ. ದೂರವಿರು ವುದರಿಂದ ಕಕ್ಷಿದಾರ ರಿಗೆ ಹಾಗೂ ವಕೀಲರಿಗೆ ತೊಂದರೆಯಾ ಗುತ್ತಿತ್ತು. ಇದನ್ನುಮನಗಂಡುಹಾಗೂ ಇಲ್ಲಿಯವರ ಬೇಡಿಕೆಗೆ ಅನುಸಾರ ಹೈಕೋರ್ಟ್ ನಿರ್ದೇ ಶನದಂತೆ ಕಡಬದಲ್ಲಿ ನ್ಯಾಯಾಲಯ ಪ್ರಾರಂಭಿಸ ಲಾಗಿದೆ. ಪ್ರಾರಂಭದಲ್ಲಿ ತಾತ್ಕಾಲಿಕವಾಗಿ ವಾರದಲ್ಲಿ ಎರಡು ದಿನ ನ್ಯಾಯಾಲಯ ಕಲಾಪಗಳು ನಡೆಯ ಲಿವೆ. ಕಡಬ ತಾಲೂಕಿಗೆ ಸಂಬಂಧಪಟ್ಟು ಸುಮಾರು 1200 ಪ್ರಕರಣಗಳ ಪೈಕಿ ಕೆಲವನ್ನು ಕಡಬ ನ್ಯಾಯಾಲಯಕ್ಕೆ ವರ್ಗಾ ಯಿಸಲಾಗುವುದು. ಇದರಿಂದ ಜನ ಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದ ಅವರು, ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಕಡಬ ವಿಧಾನ ಸೌಧದ ಬಳಿ 3 ಎಕರೆ ಜಮೀನನ್ನು ಕಾದಿರಿಸಲಾಗಿದ್ದು,
ಮುಂದೆ ಕಟ್ಟಡ ನಿರ್ಮಾಣ ಮಾಡಲಾಗು ವುದು ಎಂದರು.
ಪುತ್ತೂರು ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ಶ್ವೇತಾ ಜೆ. ಮಾತನಾಡಿ, ಎಲ್ಲ ಪ್ರಕರಣಗಳಿಗೂ ಶೀಘ್ರ ನ್ಯಾಯ ದಾನ ಒದಗಿಸಲು ನಾನು ಶ್ರಮಿಸುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಮಾತನಾಡಿ, ಕಡಬದಲ್ಲಿ ನ್ಯಾಯಾಲಯ ಸ್ಥಾಪನೆಯಾಗಿರುವುದು ಸಂತಸದ ವಿಚಾರ. ಇದಕ್ಕೆ ಹಲವರ ಶ್ರಮ ಇದೆ. ಸ್ವಲ್ಪ ಸಮಯ ಕಾಗದ ಪತ್ರಗಳ ವಿಚಾರಗಳಲ್ಲಿ ವಕೀಲರು ಜಾಸ್ತಿ ಶ್ರಮ ವಹಿಸಬೇಕಾಗಬಹುದು. ಇದಕ್ಕೆ ಪುತ್ತೂರು ವಕೀಲರ ಸಹಕಾರವೂ ಇದೆ. ಕಡಬದ ಹಲವು ವರ್ಷಗಳ ಬೇಡಿಕೆ ಈಡೇರಿಸಿದ ನ್ಯಾಯಾಧೀಶರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಕಟ್ಟಡ ಮಾಲೀಕ ಸುಂದರ ಗೌಡಮಂಡೆಕರ, ಲೋಕೋಪಯೋಗಿ ಇಲಾಖಾ ಎಂಜಿನಿಯರ್ ಪ್ರಮೋದ್ ಕುಮಾರ್ ಕೆ.ಕೆ. ಹಾಗೂ ನ್ಯಾಯಾಧಿ ಶರನ್ನು ಸನ್ಮಾನಿಸಲಾಯಿತು.ಸುಳ್ಯ ವಕೀಲರ ಸಂಘದ ಅಧ್ಯಕ್ಷ ಸುಕುಮಾರ ಕೊಡುಗುಳಿ, ಸರಕಾರಿ ಅಭಿಯೋಜಕಿ ಕವಿತಾ, ಹಿರಿಯ ನ್ಯಾಯವಾದಿಗಳಾದ ಶೀನಪ್ಪ ಗೌಡ ಬೈತಡ್ಕ, ವೆಂಕಪ್ಪ ಗೌಡ ಮಾಚಿಲ, ದುರ್ಗಾಪ್ರಸಾದ್ ರೈ ಕುಂಬ್ರ, ಭಾಸ್ಕರ ಗೌಡ ಕೋಡಿಂಬಾಳ, ಜಗದೀಶ್ ಹುದೇರಿ, ಅರಂತಡ್ಕ ಬಾಲಕೃಷ್ಣ ರೈ, ನ್ಯಾಯವಾದಿಗಳಾದ ಸಂತೋಷ್ ಕುಮಾರ್, ಮಹೇಶ್ ಕೆ.ಸವಣೂರು, ಕೃಷ್ಣಪ್ಪ ಗೌಡ ಕಕೈ, ಅಶ್ವಿತ್ ಕಂಡಿಗ, ಅವಿನಾಶ್ ಬೈತಡ್ಕ, ಪ್ರಶಾಂತ್ ಪಂಜೋಡಿ, ವಿಜಿತ್ ಮಾಚಿಲ, ಸುಮನಾ, ಅರ್ಪಿತಾ, ಕಡಬ ಠಾಣಾಧಿ ಕಾರಿ ಜಂಬುರಾಜ್ ಮಹಾಜನ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ಕಡಬ ಉಪತಹಸೀಲ್ದಾರ್ ಗೋಪಾಲ್, ಸುಳ್ಯ ಹಾಗೂ ಪುತ್ತೂರು ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನ್ಯಾಯವಾದಿ ಶಿವಪ್ರಸಾದ್ ಪುತ್ತಿಲ ಸ್ವಾಗತಿಸಿದರು. ನ್ಯಾಯವಾದಿ ಲೋಕೇಶ್ ಎಂ.ಜೆ. ವಂದಿಸಿದರು. ಬಳಿಕ ನ್ಯಾಯಾಲಯದ ಪ್ರಥಮ ಕಲಾಪ ನಡೆಯಿತು.