ಕಾಸರಗೋಡು ಇಲ್ಲಿಯ ಆಚಾರ ವಿಚಾರ ಎಷ್ಟು ಸೊಗಸೋ ಕೆಲವು ವಿಚಾರಗಳು ರಹಸ್ಯವಾಗಿಯೇ ಇರುತ್ತದೆ. ಅಂತಹಾ ಪೂಜಾಧಿಕಾರ್ಯವನ್ನು ಕೇವಲ ಈ ಭಾಗದಲ್ಲಿ ಮಾತ್ರವೇ ನೋಡಲು ಸಾಧ್ಯ ಎಂದು ಕೆಲವೊಮ್ಮೆ ಪ್ರಶ್ನೆಯು ಮೂಡುತ್ತದೆ.ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿತ್ತಾರಿ ಗ್ರಾಮದ ಪಾರೇಕಡವು ಎಂಬಲ್ಲಿ ಭಂಡಾರ ಮನೆಯಿದ್ದು ಅಲ್ಲಿ ಅನಾದಿಕಾಲದಿಂದಲೂ ಸಂರಕ್ಷಿಸಿಕೊಂಡು ಬಂದಿರುವ ತಾಳೆ ಗರಿಯ ಗ್ರಂಥವಿದ್ದು ಅದಕ್ಕೆ ವಾರದ ಮಂಗಳವಾರ ಮತ್ತು ಶುಕ್ರವಾರದ ದಿನಗಳಂದು ಪೂಜೆಗಳು ನಡೆಯುತ್ತದೆ. ಸೋಣ ಸಂಕ್ರಮಣದಂದು ವಿಶೇಷ ಪೂಜೆ ಹಾಗೂ ದೇವ ದರುಶನ ಸಹಿತ ಮಹಾ ಗ್ರಂಥ ಪೂಜೆ ಶ್ರೀ ಸನ್ನಿಧಿಯಲ್ಲಿ ನಡೆಯುತ್ತದೆ.ವರ್ಷ ಪ್ರತಿ ನಡೆಯುವ ವಾರ್ಷಿಕ ಗ್ರಂಥ ಪೂಜಾ ಮಹೋತ್ಸವು ನಿನ್ನೆಯ ದಿನ ರಾತ್ರಿ ಭಂಡಾರ ಮನೆಯಲ್ಲಿ ಜರಗಿತು .
ದೇವಾಲಯದಲ್ಲಿ ಅಥವಾ ದೇವಾಲಯಗಳಲ್ಲಿ ಮೂರ್ತಿಗಳಿಗೆ, ಕಟ್ಟೆಗಳಿಗೆ , ದೇವರ ಛಾಯಾಚಿತ್ರಕ್ಕೆ, ಮರಗಳಿಗೆ , ಆಯುಧಗಳಿಗೆ ಅಥವಾ ಕಲಶಕ್ಕೆ ಆರಾಧನೆ ನಡೆಯುವುದು ಸರ್ವೇ ಸಾಮಾನ್ಯವಾದ ವಿಷಯ. ಆದರೆ ಅಪರೂಪದಲ್ಲಿ ಅಪರೂಪ ಆರಾಧನೆಯು ನಮ್ಮ ಮಲಬಾರ್ ಭಾಗದಲ್ಲಿ ಉದಗಲಕ್ಕೂ ಹಾಸು ಹೊಕ್ಕಾಗಿರುತ್ತದೆ. ಇಲ್ಲಿ ವಿಶೇಷ ಎಂದ್ರೆ ತಾಳೆಗರಿಯ ಗ್ರಂಥವನ್ನು ಮಹಾ ಕಾಳಿಯ ಸ್ವರೂಪವೆಂದು ಭಾವಿಸಿ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ತಾಳೆಗರಿಯ ಮೇಲೆ ಹಳೆ ಕನ್ನಡ ಮಾದರಿಯ ಲಿಪಿಗಳನ್ನು ಬರೆಯಲಾಗಿದ್ದು ಇಲ್ಲಿಯವರೆಗೆ ಅದರಲ್ಲಿ ಏನು ಮಾಹಿತಿ ಅಡಕವಾಗಿದೆ ಎನ್ನುವ ವಿಚಾರ ರಹಸ್ಯವಾಗಿಯೇ ಉಳಿದಿದೆ. ಆದರೆ ಆ ಗ್ರಾಮದ ಹಳೆ ತಲೆಮಾರಿನ ಹಿರಿ ಜೀವಗಳು ಹೇಳುವಂತೆ ಇದು ಋಷಿಗಳಿಂದ ಸಿಕ್ಕ ಗ್ರಂಥವಾಗಿದ್ದು ಇದರಲ್ಲಿ ನವ ಶಕ್ತಿಗೆ ಸಮಂಧಿಸಿದ ಕಾರಣಿಕ ಕಥೆಗಳು ಅಡಕವಾಗಿವೆಯಂತೆ. . ಆದ್ರೂ ೫೦ ಕ್ಕೂ ಅಧಿಕ ಪುಟಗಳ ಅದರಲ್ಲಿನ ಸತ್ಯತೆ ಇನ್ನೂ ನಿಗೂಢವಾಗಿದೆ .
ಗ್ರಂಥವನ್ನು ಪ್ರತೀ ವರ್ಷದ ಸೋಣ ಸಂಕ್ರಮಣದಂದು ಆ ಊರಿನ ಹಿರಿಯರ ಸಮ್ಮುಖದಲ್ಲಿ ವಾಚಿಸುವ ಪರಿಪಾಠವಿದೆ . ಆದ್ರೆ ಮೋಡಿ ಅಕ್ಷರಗಳು ಹೆಚ್ಚಾಗಿ ಇರುವುದರಿಂದ ಅದನ್ನು ಓದುವುದೇ ಸಾಹಸವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ . ಈ ಗ್ರಂಥ ಪೂಜೆಯನ್ನು ಶ್ರದ್ದಾ ಭಕ್ತಿಯಿಂದ ಆ ಗ್ರಾಮದ ಯಾರದೇ ಮನೆಯಲ್ಲಿ ಮಾಡಿದರೆ ಅವರ ಇಷ್ಟಾರ್ಥವು ಈಡೇರುತ್ತದೆ ಎನ್ನುವ ನಂಬಿಕೆ ಇದೆ . ದೈವಗಳು ಕಾರ್ಣಿಕ ಕಥೆಗಳು ಆ ದೇವಾಲಯದ ಹುಟ್ಟು ಬೆಳವಣಿಗೆ ಶಕ್ತಿಯ ಬಗ್ಗೆ ನುಡಿ ಕೊಟ್ಟರೆ ಈ ಗ್ರಂಥ ಪೂಜೆಯ ದಿನ ಪಾತ್ರಿ ಅರ್ಥತ್ ಶ್ರೀ ದೇವರ ದರ್ಶನ ಸೇವೆಯನ್ನು ಮಾಡುವರು ಗ್ರಂಥದಲ್ಲಿ ಏನು ಮಾಹಿತಿ ಅಡಗಿದೆ ಎನ್ನುವುದರ ಸುಳಿವು ನೀಡುತ್ತಾರೆ .ವಾರ್ಷಿಕ ಪೂಜಾ ದಿನದ ಅಂಗವಾಗಿ ಶ್ರೀ ದೇವರ ದರ್ಶನ ಕೆಂಡ ಸೇವೆ , ಕಾಯಿ ಒಡೆಯುವುದು ಮತ್ತು ಮಹಾ ಪೂಜೆಯು ನಡೆಯಿತು .
ಗಿರೀಶ್ ಪಿ ಎಂ