ಸಾಹಿತಿ , ಪತ್ರಕರ್ತ ಗಿರೀಶ್ ಪಿ ಎಂ ಇವರಿಗೆ “ಚುಟುಕು ಸಿರಿ ರತ್ನ” ಪ್ರಶಸ್ತಿ-2026 ಪ್ರಧಾನ … !

ಕಾಸರಗೋಡು:ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಇದರ ವಾರ್ಷಿಕೋತ್ಸವದ ಅಂಗವಾಗಿ ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ಕಾಸರಗೋಡು – ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನವು ಫೆಬ್ರವರಿ 22 ರಂದು ನಡೆಯಿತು .

ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಪ್ರತಿಷ್ಠಿತ ಪ್ರಶಸ್ತಿಯಾದ “ಚುಟುಕು ಸಿರಿ ರತ್ನ” ಪ್ರಶಸ್ತಿ-2026 ನ್ನು ಸಾಹಿತಿ , ಪತ್ರಕರ್ತ ಗಿರೀಶ್ ಪಿ ಎಂ ಇವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪರಮಪೂಜ್ಯ ಶ್ರೀ ಶ್ರೀ ರಮೇಶ ಮಹಾಸ್ವಾಮಿಗಳು ಸಾ|| ಗೋನಾಳ ತಾಲೂಕು ಲಕ್ಷ್ಮೇಶ್ವರ ಡಾ. ವಾಮನ್ ರಾವ್ ಬೇಕಲ್ ಸಂಸ್ಥಾಪಕರು ಕನ್ನಡ ಭವನ ,ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ಕೆ.ಎನ್. ವೆಂಕಟರಮಣ ಹೊಳ್ಳ , ಜಯಾನಂದ ಪೆರಾಜೆ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಸಂಚಾಲಕರು , ವಿಶಾಲಾಕ್ಷ ಪುತ್ರಕಳ ಸಂಘಟನಾ ಕಾರ್ಯದರ್ಶಿ ಕ.ಸಾ.ಪ. ಕೇರಳ ಗಡಿನಾಡ ಘಟಕ, ನಮ್. ವಿಜಯಕುಮಾರ್ ಕನ್ನಡ ಕಟ್ಟಾಳು ಕ.ರ.ವೇ. ಬೆಂಗಳೂರು ಕರ್ನಾಟಕ ರಾಜ್ಯ ಸಂಚಾಲಕರು, ಡಾ. ಸಂ.ವೆಂ. ತಮ್ಮನಗೌಡ್ರ ಕನ್ನಡ ಭವನ ಗದಗ ಜಿಲ್ಲಾಧ್ಯಕ್ಷರು, ಡಾ. ಕೆ.ಜಿ. ವೆಂಕಟೇಶ್ ಕನ್ನಡ ಭವನ ಶಿವಮೊಗ್ಗ ಜಿಲ್ಲಾಧ್ಯಕ್ಷರು ,ಡಾ. ಸುರೇಶ ನೆಗಳಗುಳಿ ಸಾಹಿತಿಗಳು, ವಿರಾಜ್ ಅಡೂರು ಜಿಲ್ಲಾಧ್ಯಕ್ಷರು ಕೇರಳ ರಾಜ್ಯ ಚುಟುಕು ಸಾಹಿತ್ಯ ಪರಿಷತ್ ಕಾಸರಗೋಡು, ಶಾರದಾ ಮೊಳೆಯಾರ್ ಸಂಘಟನಾ ಕಾರ್ಯದರ್ಶಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕಾಸರಗೋಡು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!