ಕಾಸರಗೋಡು: 2001ರ ವೇಟ್ಟುಮ್ಮಲ್ ರತೀಶ್ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದಿಂದ ತಲೆಮರೆಸಿಕೊಂಡಿದ್ದ ಕದಿರೂರು ನಿವಾಸಿ ಸಿ.ಎಚ್. ಅಶ್ರಫ್ (58) ಎಂಬಾತನನ್ನು 25 ವರ್ಷಗಳ ಬಳಿಕ ಪ್ರತ್ಯೇಕ ತನಿಖಾ ತಂಡ ಬಂಧಿಸಿದೆ.

ಕೃತ್ಯದ ಬಳಿಕ ಮುಂಬೈ, ಬೆಂಗಳೂರು ಮೊದಲಾದೆಡೆ ಹೋಟೆಲ್ ಕಾರ್ಮಿಕನಾಗಿದ್ದ ಈತ, ಕಳೆದ 15 ವರ್ಷಗಳಿಂದ ಪಯ್ಯನ್ನೂರು ಬಳಿ ಗೂಡಂಗಡಿ ನಡೆಸಿ ಜೀವನ ಸಾಗಿಸುತ್ತಿದ್ದನು.

ಸಿಟಿ ಪೊಲೀಸ್ ಕಮೀಷನರ್ ವಿಜಯ್ ಭರತ್ ರೆಡ್ಡಿ ಅವರ ನಿರ್ದೇಶನದಂತೆ ರಚಿಸಲಾದ ವಿಶೇಷ ತಂಡವು ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ದೀರ್ಘಕಾಲದಿಂದ ನಾಪತ್ತೆಯಾಗಿದ್ದ ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.


