ಸಾಮಾಜಿಕ ಜಾಲತಾಣಗಳಲ್ಲಿ ಭಯ ಹರಡುವ ಸಂದೇಶದ ವಿರುದ್ಧ ಕಠಿಣ ಕ್ರಮಕ್ಕೆ ಸ್ವೀಕರ್ ಯು.ಟಿ.ಖಾದರ್ ಸೂಚನೆ

ಮಂಗಳೂರು:ಉಳ್ಳಾಲ ಮಸೀದಿ ಬಳಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಕಿಡಿಕೇಡಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಭಾಧ್ಯಕ್ಷ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಪೊಲೀಸ್ ಕಮಿಷನ‌ರ್ ಜೊತೆ ಮಾತುಕತೆ ನಡೆಸಿರುವ ಸಭಾಧ್ಯಕ್ಷ ಯು.ಟಿ.ಖಾದರ್, ಉಳ್ಳಾದಲ್ಲಿ ಸರ್ವ ಧರ್ಮೀಯರು ಸೌಹಾರ್ದಯುತ ಸಹಬಾಳ್ವೆ ನಡೆಸುತ್ತಿದ್ದು ಈ ರೀತಿಯ ಬೆದರಿಕೆ ಪೋಸ್ಟ್ ಗಳ ಮೂಲಕ ಕೋಮು ಸೌಹಾರ್ದವನ್ನು ಕದಡುವ ಹುನ್ನಾರದ ಬಗ್ಗೆ ಪೋಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!