ಮಂಗಳೂರು : ಇಸ್ರೇಲ್-ಇರಾನ್ ಸಂಘರ್ಷದ ಕಾರಣ ಮಾ. 4ರ ವರೆಗೆ ಮಂಗಳೂರು ಮತ್ತು ಗಲ್ಫ್ ರಾಷ್ಟ್ರಗಳ ನಡುವಣ ವಿಮಾನ ಸಂಚಾರವನ್ನು ರದ್ದು ಮಾಡಲಾಗಿದೆ.
ಮಾ. 3ರ ಮಂಗಳೂರು-ದೋಹಾ (ಐಎಕ್ಸ್ 821), ದೋಹಾ-ಮಂಗಳೂರು (ಐಎಕ್ಸ್ 822), ಮಂಗಳೂರು-ದುಬೈ (ಐಎಕ್ಸ್813), ಮಾ.4ರ ದುಬೈ-ಮಂಗಳೂರು(ಐಎಕ್ಸ್ 814), ಮಾ.3ರ ಮಂಗಳೂರು-ಕುವೈಟ್ (ಐಎಕ್ಸ್ 851), ಮಾ.4ರ ಕುವೈಟ್-ಮಂಗಳೂರು (ಐಎಕ್ಸ್ 852), ಮಾ.3ರ ಮಂಗಳೂರು-ದಮ್ಮಾಮ್ (ಐಎಕ್ಸ್ 847), ಮಾ.4ರ ದಮ್ಮಾಮ್-ಮಂಗಳೂರು (ಐಎಕ್ಸ್ 848), ಮಾ.3ರ ಮಂಗಳೂರು-ಅಬುಧಾಬಿ, ಮಾ.4ರ ಅಬುಧಾಬಿ-ಮಂಗಳೂರು (ಐಎಕ್ಸ್ 816) ವಿಮಾನಗಳ ಸಂಚಾರ ರದ್ದಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.