ಏಳ್ ಬೂಡುದ ಸತ್ಯ ಶ್ರೀ ವರ್ಣಾರ ಪಂಜುರ್ಲಿ ದೈವ 🙏

ಈ ದೈವವು ಬೆಳ್ಳಿ ಬಂಗಾರಕ್ಕೆ ಬಯಸಿದ ದೈವ 🙏

ಈ ದೈವಕ್ಕೆ ಆವರ ತೆಗೆದು ಕೊಳ್ಳುವವರೆಗೆ ಬಾಯಿ ಬರುವುದಿಲ್ಲ, ಅಬೂಬ ಅಬೂಬ ಅಂತ ಹೇಳುತ್ತದೆ, ಆವರದ ನಂತರ, ಪಟ್ಟದ ಆಯುಧ ಕೈಗೆತ್ತಿದ ಮೇಲೆ ಮಾತನಾಡುತ್ತದೆ 🙏

ಮಲಾರ್ ಬೂಡುವಿನಲ್ಲಿದ್ದ ಮಲಾರ ಪಂಜುರ್ಲಿ ದೈವವು ವರ್ಣಾರ ಬೂಡುಗೆ ದೃಷ್ಟಿ ಹಾಕುತ್ತದೆ ಅಲ್ಲಿಗೆ ಹೋಗಬೇಕೆಂದು ಜೋಗಿ ಪುರುಷನ ಒರುವಾಗುತ್ತದೆ 🙏

ವರ್ಣಾರ ಬೂಡುವಿನಲ್ಲಿ ಎತ್ತುಗಳು ಇಲ್ಲದ ಕಾರಣ, ಬೂಡು ಅರಸರು(ಬಳ್ಳಾಕ್ಲು )ವರ್ಣಾರ ಬೀಮು ಎಂಬವನನ್ನು ಸುಬ್ರಮಣ್ಯಕ್ಕೆ ಎತ್ತುಗಳನ್ನು ತರಲು ಕಳುಹಿಸುತ್ತಾರೆ 🙏

ಅಲ್ಲಿ ಅವನಿಗೆ ಎತ್ತುಗಳ ಕ್ರಯ ಮತ್ತು ಇವನಲ್ಲಿ ಇರುವ ಹಣ ಸಮ ಸಮ ಆಗದ ಕಾರಣ ಬೇಜಾರಿನಲ್ಲಿ ಹಿಂತಿರುಗುತ್ತಾನೆ 🙏

ಅವಾಗ ಜೋಗಿ ಪುರುಷನ ಒರುವಲ್ಲಿದ್ದ ದೈವವು ಇವನು ಪರಸ್ಪರ ಒಂದಾಗುತ್ತಾರೆ, ಜೋಗಿಪುರುಷ (ದೈವ) ಇವನಲ್ಲಿ ಎಲ್ಲಿಂದ ಬಂದೆ, ಎಲ್ಲಿಗೆ ಹೋದೆ, ಮನಸಿನಲ್ಲಿ ಬೇಸರ ಏನು ಎಂದು ಕೇಳುವಾಗ, ಹೋದ ವಿಷಯವನ್ನು ಹೇಳುತ್ತಾನೆ 🙏

ಅದಕ್ಕೆ ಜೋಗಿ ಪುರುಷ ನೀನೇನು ಬೇಸರ ಮಾಡಬೇಡ, ನಿನಗೆ ನಾನು ಎತ್ತುಗಳನ್ನು ಕೊಡುತ್ತೇನೆ ಅಂದ, ಅವಾಗ ಬೀಮು ಹೇಳುತ್ತಾನೆ, ಈ ನಾಲ್ ಇಲ್ಲ್ ನಟ್ಟುನ ಪುರುಸೆ ನಿಂಡ ಸಾಧ್ಯನಾ ಅಂತ ಹೇಳುತ್ತಾ ಮುಂದೆ ಸರಿಯುತ್ತಾರೆ 🙏

ಜೋಗಿಪುರುಷನು ಮನಸಿನಲ್ಲಿ ಆಲೋಚನೆ ಮಾಡಿ ವರ್ಣಾರೆ ಬೂಡುಗೆ ಎತ್ತಿನ ರೂಪದಲ್ಲಿ ಹೋಗುವುದು ಒಳಿತು ಎಂದು “ಎರುತ” ಒರುವಾಗುತ್ತದೆ 🙏

ಸ್ವಲ್ಪ ಮುಂದೆ ಹೋಗುವಾಗ ಜೋಗಿ ಪುರುಶ ಕಾಣುವುದಿಲ್ಲ, ನಂತರ ಸ್ವಲ್ಪ ಮುಂದೆ ಹೋಗುವಾಗ ಒಂದು ಎತ್ತು (ಎರು) ಕಾಣುತ್ತದೆ🙏

ನಾನು ಕಾಲಿ ಕೈಯ್ಯಲ್ಲಿ ಹೋದರೆ ನನ್ನನ್ನು ಬಳ್ಳಾಲರು ಬೈದಾರು ಈ ಎತ್ತನ್ನು ಕೊಂಡು ಹೋಗುವ ಎಂದು ಅದನ್ನು ಎಳೆದೋಯ್ಯುತ್ತಾನೆ 🙏

ಬೂಡುವಿಗೆ ತಲುಪುವಾಗ, ಒಂದೇ ಮರದಲ್ಲಿ ಒಂದೇ ಹಲಸಿನ ಹಣ್ಣು ಇರುತ್ತದೆ ಇದರ ಪರಿಮಳ ದೂರದಿಂದಲೇ ಎತ್ತು ವಿಗೆ ಸಿಗುತ್ತದೆ 🙏

ಅಷ್ಟರಲ್ಲಿ ಆ ಹಣ್ಣನ್ನು ಅಲ್ಲಿದ್ದವರು ಕೊಯ್ದು ತಿನ್ನುತ್ತಿರುತ್ತಾರೆ, ಅದರಲ್ಲಿ ಉಳಿದ “ಕೂoಜಿ” ಯನ್ನು ಎತ್ತಿಗೆ ಹಾಕ್ತಾರೆ, ಕೂoಜಿ ಯನ್ನು ತಿಂದ ಎತ್ತಿಗೆ ಹುಚ್ಚು(ಮರ್ಲ್ )ಹಿಡಿಯುತ್ತದೆ 🙏

ಹುಚ್ಚು ಹಿಡಿದ ಎತ್ತು ಅಲ್ಲಿದ್ದ ಬಲ್ಲಾಳ್ ರನ್ನು ಎಲ್ಲರನ್ನೂ ಸರ್ವನಾಶ ಮಾಡುತ್ತದೆ, ಆಗ ಬೀಮುವಿಗೆ ನನ್ನೊಂದಿಗೆ ಬಂದದ್ದು ಎತ್ತು ಅಲ್ಲ ಇದೊಂದು ದೈವ ಅಂತ ತಿಳಿದು ಪ್ರಾಥನೆಯೊಂದಿಗೆ ಸಮಾಧಾನ ಮಾಡುತ್ತಾನೆ, ಎತ್ತು ನಿಜರೂಪ ತಾಲಿ ದೈವವಾಗಿ ಅವತಾರ ಎತ್ತುತ್ತದೆ 🙏

ಆಗ ಕುಡುಮತಳ (ಧರ್ಮಸ್ಥಳ) ದಿಂದ ದೇವರ ಅಷರೀರವಾಣಿ ಕೇಳುತ್ತದೆ, ನೀನು ಅಲ್ಲಿಯೇ ವರ್ಣಾರ ಪಂಜುರ್ಲಿ ಯಾಗಿ ನೆಲೆಯಾಗು, ಆದರೆ ಒಂದು ಮಾತು ನಿನ್ನ ಹೊಟ್ಟೆ ತುಂಬುವವರೆಗೂ ನೀನು ಬಾಯಿ ಬಿಟ್ಟು ಮಾತನಾಡಬಾರದು, ಹೊಟ್ಟೆ ತುಂಬಿದ ನಂತರ ಕುಟುಂಬದವರನ್ನು ಕರೆದು ಮಾತನಾಡು ಎಂದು 🙏

ಹಾಗೇ ಇವತ್ತಿಗೂ ದೈವ ಆ ರೀತಿ ಮಾಡುತ್ತದೆ 🙏

ಎರುತ ಸಂದ್ ಆಗುವಾಗ ದೈವಕ್ಕೆ ಮರ್ಲ್ ಹಿಡಿಯುತ್ತದೆ, ಅವಾಗ ಕೈ ಕೈ ಹಿಡಿದು ಕೋಟೆ ಕಟ್ಟಿ ದೈವವನ್ನು ಹೊರಗೆ ಹೋಗದ ಹಾಗೇ ನೋಡಿ ಕೊಳ್ಳುತ್ತಾರೆ 🙏

ಹೊರಗೆ ಹೋದರೆ ಕುಟುಂಬವನ್ನು ಬಿಟ್ಟು ದೈವ ಹೋಯಿತು ಅಂತ ನಂಬಿಕೆ 🙏

ಅಲ್ಲಿಂದ ದೈವವು ನೆಲ್ಯಾಡಿ ಬೂಡಿಗೆ ತೆರಳಿ, ಅಲ್ಲಿ ದಾನ ಧರ್ಮದ ಸ್ಥಳ ಆದರಿಂದ ಮೂಡಾಯಿ ಕುಡುಮತಳವನ್ನು, ಧರ್ಮಸ್ಥಳ ಅಂತ ಪರಿವರ್ತಿಸಿ ಅಣ್ಣಪ್ಪ ನಾಗಿ ನೆಲಯೂರುತ್ತದೆ 🙏

ಪನಿಯೆರೆ ಸಮುದ್ರದಾತ್ ಉಂಡು

ಒಂಜಿ ಪನಿ ಬರ್ಸದಾತ್ ತೆರಿಪಾದೆ 🙏

ವಂದನೆಗಳೊಂದಿಗೆ 🙏

❣️ಸ್ನೇಹಜೀವಿ❣️

ಬರಹ ✍️:- ಉದಯಮಲ್ಲಿ ಅಮ್ಮ್ಚಿ ಕೆರೆ ಬೆದ್ರಡ್ಕ, ಸಿರಿಬಾಗಿಲು, ಕಾಸರಗೋಡು 671124

SHARE
Loading spinner

Leave a Reply

Your email address will not be published. Required fields are marked *

error: Content is protected !!