“ಟೆಕ್ ಯುವ” ರಾಷ್ಟ್ರೀಯ ಮಟ್ಟದ ತಾಂತ್ರಿಕ ಸಾಂಸ್ಕೃತಿಕ ಹಾಗೂ ಕ್ರೀಡಾ ಉತ್ಸವ ಮಾರ್ಚ್ 9 ಹಾಗೂ 10 ರಂದು

ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸಂಸ್ಥೆಯು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವ ಉದ್ದೇಶದಿಂದ “ಟೆಕ್ ಯುವ” ರಾಷ್ಟ್ರೀಯ ಮಟ್ಟದ ತಾಂತ್ರಿಕ ಸಾಂಸ್ಕೃತಿಕ ಹಾಗೂ ಕ್ರೀಡಾ ಉತ್ಸವ ಮಾರ್ಚ್ 9 ಹಾಗೂ 10 ರಂದು ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಶ್ರೀನಿವಾಸ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥರಾದ ಡಾ. ರಾಮಕೃಷ್ಣ ಎನ್.ಹೆಗ್ಡೆ ತಿಳಿಸಿದರು .

ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಭಾರತ, ಅಮೇರಿಕ, ಫಿಲಿಪೈನ್ಸ್ ಹಾಗೂ ಇನ್ನಿತರ ದೇಶಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ಸಾಫ್ಟ್ರ್ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಯುನಿಫೈ ಸಿಎಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಮಾನವ ಸಂಪನ್ಮೂಲ ಸೇವೆಗಳ ಮುಖ್ಯಾಧಿಕಾರಿಯಾದ ಶ್ಯಾಮ್ ಪ್ರಸಾದ್ ಹೆಬ್ಬಾರ್ ರವರು “ಟೆಕ್ ಯುವ-26” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾರ್ಚ್ 9 ಕ್ಕೆ ಉದ್ಘಾಟಿಸಲಿದ್ದಾರೆ ಎಂದರು . ಈ ಸಂಧರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿರುವರು ಎಂದರು .

ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್ ಮಾತನಾಡಿ , ಮೊದಲನೇ ದಿನ, ಮಾರ್ಚ್ 9 ರಂದು, ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಪರ್ಫೆಕ್ಸ್ ಕೋಡ್, ಕ್ಯಾಪ್ಟರ್ ದಿ ಫ್ಲಾಗ್, ಬ್ರಾಂಡ್ಸ್ ಬಡ್ಡಿ, ಮೈಂಡ್ ಪ್ರಿಂಟ್ಸ್, ಬ್ರೆಂಡ್ ಕೋಡಿಂಗ್, ಪ್ರಾಂಪ್ಟ್ ಇಂಜಿನಿಯರಿಂಗ್, ಎರರ್ ಎಲಿಮಿನೇಟರ್, ವೆಬ್ ಡಿಸೈನ್, ಪ್ಯಾಟರ್ನ್ ಕೋಡಿಂಗ್. ಡಾನ್ಸ್ ಬ್ಯಾಟಲ್, ಸ್ಪಾರ್ಟ್ ಅಪ್ ಪಿಚ್, ಡಾಡ್ಜ್ ಬಾಲ್, ಜಿಯೋ ಗೆನ್ಸರ್, ಜ್ಯಾಮ್, ಶಾಜಿಕ್ ಎಕ್ಟೋ, ಲೋಗೋ ಡಿಸೈನ್, ಟೆಕ್ನಿಕಲ್ ಡಿಬೇಟ್, ಥೋಬಾಲ್, ರೋಬೊ ಸೋಕರ್, ಐಡಿಯಥಾನ್, ಲೈನ್ ಫಾಲೋವರ್, ಕಾಡ್ ಬ್ಯಾಟಲ್, ಮೋಕ್ ಪ್ರೆಸ್, ಬಿಸಿನೆಸ್ ಸೆನ್ಸ್ ಮತ್ತಿತರ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು . ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಆದರ್ಶ್ , ಸಾಗರ್ ಎ. , ವಿಶ್ರುತ ಕೃಷ್ಣ ಸಹಿತ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!