ವಿವಿಧ ನೂತನ ಸೌಕರ್ಯ ಉದ್ಘಾಟನೆಯೊಂದಿಗೆ ವಾಮಂಜೂರು ಜಿ.ಎಲ್ ಪಿ ಶಾಲೆಯ ಶಾಲಾ ಪ್ರವೇಶೋತ್ಸವ

ಜಿ.ಎಲ್ ಪಿ ಶಾಲೆ ವಾಮಂಜೂರಿನಲ್ಲಿ ಶಾಲಾ ಮಟ್ಟದ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ಡು ಸದಸ್ಯರಾದ ಶ್ರೀಯುತ ಆದರ್ಶ್ ಬಿ.ಎಂ ವಹಿಸಿದ್ದರು. ಪ್ರವೇಶೋತ್ಸವದ ಉದ್ಘಾಟನೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಮೆಂಬರ್ ಆದ ಶ್ರೀಯುತ ಅಬ್ದುಲ್ ಹಮೀದ್ ಅವರು ನೆರವೇರಿಸಿದರು.

ವಾಮಂಜೂರು ಶಾಲಾ ಹಳೆ ವಿದ್ಯಾರ್ಥಿಯಾದ ಶ್ರೀಯುತ ಮುಜಿಬು ರಹಿಮಾನ್ ಇವರು ಕೊಡುಗೆಯಾಗಿ ನೀಡಿದ ಇಂಗಿಷ್ ಭಾಷೆಯ ಲ್ಯಾಬ್ ಹಾಗೂ ಇಂಟರಾಕ್ಟಿವ್ ಪ್ಲಾಟ್ ಪ್ಯಾನಲ್ನ ಉದ್ಘಾಟನೆಯನ್ನು ನಿವೃತ್ತ ಡಿಡಿಇ ಶ್ರೀಯುತ ದಿನೇಶ್ ನೆರವೇರಿಸಿದರು.

ಯುಕೆಜಿ ತರಗತಿಯನ್ನು ಶ್ರೀಯುತ ಮುಜಿಬು ರಹಿಮಾನ್ ಅವರ ತಾಯಿಯಾದ ಶ್ರೀಮತಿ ಝಹಿದ ಬಾನು ಉದ್ಘಾಟಿಸಿಯಾದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶೇಕ್ ಉಸ್ಮಾನ್ , ಪಿಟಿಎ ಅಧ್ಯಕ್ಷರಾದ ಶ್ರೀಯುತ ಕಲಂದರ್ ತಾಜುದ್ದೀನ್ ಹಳೆ ವಿದ್ಯಾರ್ಥಿ ಸಂಗದ ಅಧ್ಯಕ್ಷರಾದ ಶ್ರೀಯುತ ರಾಘವನ್ ಶ್ರೀಮತಿ ಪ್ರಸಿದ್ದ ಟೀಚರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶ್ರೀಯುತ ಲಾರೆನ್ಸ್ ಡಿಸೋಜ ಇವರು ಮಕ್ಕಳಿಗೆ ಶಾಲಾ ಬ್ಯಾಗ್ ಶಾಲಾ ಹಳೆ ವಿದ್ಯಾರ್ಥಿಯವರಿಂದ ಕೊಡೆ , ಎಸಫ್ ಬ್ಯಾಂಕ್ ವತಿಯಿಂದ ನೋಟ್ ಪುಸ್ತಕ ,ಕಲಿಕಾ ಕಿಟ್ ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.

ಶಾಲಾ ಶಿಕ್ಷಕಿ ಸೌಮ್ಯ ಟೀಚರ್ ಪ್ರಾರ್ಥನೆ ಹಾಡಿದರು. ಶ್ರೀಮತಿ ಬಿ.ಫಾತಿಮಾ ಟೀಚರ್ ವಂದಿಸಿ ಶ್ರೀಮತಿ ಶೋಭಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!