ಕೆನರಾ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ – ಮಹಿಳಾ ಉದ್ಯಮಿಗಳ ಎಕ್ಸ್ಪೋಗೆ ಭರ್ಜರಿ ಪ್ರತಿಕ್ರಿಯೆ

ಮಂಗಳೂರು, ಮಾರ್ಚ್ 9: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೆನರಾ ಕಾಲೇಜು (ಸ್ವಾಯತ್ತ), ಮಂಗಳೂರು ಇಲ್ಲಿ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಉದ್ಯಮಿಗಳ ಎಕ್ಸ್ಪೋ ಕಾರ್ಯಕ್ರಮವನ್ನು ರೋಟರಿ ಮಂಗಳೂರು ಮೆಟ್ರೋ ಸಹಯೋಗದಲ್ಲಿ ಮಾರ್ಚ್ 9, 2026ರಂದು ಆಯೋಜಿಸಲಾಯಿತು.


ಈ ಕಾರ್ಯಕ್ರಮದ ಅಂಗವಾಗಿ ಸುಮಾರು 35 ಮಹಿಳಾ ಉದ್ಯಮಿಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ವಿವಿಧ ಸ್ಟಾಲ್‌ಗಳ ಮೂಲಕ ಪ್ರದರ್ಶಿಸಿ, ಮಹಿಳಾ ಉದ್ಯಮಶೀಲತೆ ಮತ್ತು ಹೊಸತನವನ್ನು ಪ್ರೋತ್ಸಾಹಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀಮತಿ ಅಶ್ವಿನಿ ಕಾಮತ್‌ (ಕೆನರಾ ಹೈ-ಸ್ಕೂಲ್‌ ಅಸೋಸೀಯೇಶನ್‌ ಕೌನ್ಸಿಲ್‌ ಸದಸ್ಯರು) ಇವರು ಭಾಗವಹಿಸಿದ್ದು, ಮಹಿಳಾ ಸಬಲೀಕರಣಕ್ಕೆ ಉದ್ಯಮಶೀಲತೆ ಮತ್ತು ಶಿಕ್ಷಣದ ಮಹತ್ವವನ್ನು ತಮ್ಮ ಭಾಷಣದಲ್ಲಿ ವಿವರಿಸಿದರು.


ಈ ಸಂದರ್ಭದಲ್ಲಿ ಶ್ರೀಮತಿ ಸುರೇಖ ಕಿಣಿ, ಅಧ್ಯಕ್ಷರು, ರೋಟರಿ ಮಂಗಳೂರು ಮೆಟ್ರೋ ಇವರು ಉಪಸ್ಥಿತರಿದ್ದರು.
ಮಹಿಳಾ ಉದ್ಯಮಿಗಳ ಎಕ್ಸ್ಪೋವನ್ನು ಸಿಎ ಎಂ. ಜಗನ್ನಾಥ್‌ ಕಾಮತ್‌(ಕರಸ್ಪಾಂಡೆಂಟ್) ಹಾಗೂ ಶ್ರೀ. ಎಂ. ಶಿವಾನಂದ ಶೆಣೈ, ಮ್ಯಾನೇಜರ್ (ಕೆನರಾ ಹೈ-ಸ್ಕೂಲ್‌ ಅಸೋಸಿಯೇಷನ್ ಕೌನ್ಸಿಲ್ ಸದಸ್ಯರು) ಇವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು, ರೋಟರಿ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಸ್ಟಾಲ್‌ಗಳಿಗೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!