ಅತ್ತಾವರ 55ನೇ ವಾರ್ಡಿನಲ್ಲಿ ₹8 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ಮಂಗಳೂರು: ಪಾಲಿಕೆ ವ್ಯಾಪ್ತಿಯ ಅತ್ತಾವರ 55ನೇ ವಾರ್ಡಿನಲ್ಲಿ ₹8 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಶಾಸಕರಾದ Vedavyas Kamath ಅವರ ನೇತೃತ್ವದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ತಾವು ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳೀಯರು ರಸ್ತೆ ಅಭಿವೃದ್ಧಿಯ ಅಗತ್ಯತೆಯನ್ನು ಗಮನಕ್ಕೆ ತಂದಿದ್ದರು. ಅದರಂತೆ ಅನುದಾನವನ್ನು ವ್ಯವಸ್ಥೆ ಮಾಡಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಶೀಘ್ರದಲ್ಲೇ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯರಾದ ಶೈಲೇಶ್ ಬಿ. ಶೆಟ್ಟಿ, ಹಿರಿಯ ಕಾರ್ಯಕರ್ತರಾದ ಪುಂಡಲೀಕ ಸುವರ್ಣ, ನಾರಾಯಣ ಶೆಟ್ಟಿ, ದೇವದಾಸ ಶೆಟ್ಟಿ, ರಾಜರತ್ನ ಸನಿಲ್, ವಾರ್ಡ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಬೂತ್ ಅಧ್ಯಕ್ಷರಾದ ಗಣೇಶ್ ಕೊಟ್ಟಾರಿ, ಪ್ರಮೋದ್ ಕೊಟ್ಟಾರಿ, ದಿನೇಶ್ ಕುಲಾಲ್, ಸೋಮಶೇಖರ್, ಕಾರ್ಯದರ್ಶಿ ಲೋಕೇಶ್, ನಾರಾಯಣ ಕುಂದರ್ ಸೇರಿದಂತೆ ಪ್ರವೀಣ್ ನಿಡ್ಡೇಲ್, ತರುಣ್, ಪ್ರೇಮಲತಾ ನಾಯ್ಕ, ಕಿಶನ್, ಮಧು ಕುಲಾಲ್, ಪ್ರವೀಣ್ ಪಟ್ನ, ರಾಜೀವ್ ಪೂಜಾರಿ, ರಮೇಶ್, ಬಬಿತ, ಹೊನ್ನಮ್ಮ, ಭಾಗಿ, ಉಷಾ, ಸುನೀತಾ, ಅಶ್ವಿನಿ, ಮಮತಾ ಮೊದಲಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!