ಮಂಗಳೂರು ಹೊಯ್ಗೆಬಜಾರ್ ವಾರ್ಡಿನಲ್ಲಿ ₹1 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 57ನೇ ಹೊಯ್ಗೆಬಜಾರ್ ವಾರ್ಡಿನ ಕೆ.ಎನ್. ಬೋರ್ಡ್ ಯಾರ್ಡ್ ರಸ್ತೆಯ ಸುಮಾರು ಒಂದು ಕೋಟಿ ರೂ. ಅನುದಾನದಲ್ಲಿ ಸಮಗ್ರ ಅಭಿವೃದ್ಧಿಗೊಳ್ಳಲಿದ್ದು, ಶಾಸಕ ವೇದವ್ಯಾಸ ಕಾಮತ್‌ ರವರ ನೇತೃತ್ವದಲ್ಲಿ ಇತ್ತೀಚಿಗೆ ಗುದ್ದಲಿ ಪೂಜೆಯು ನಡೆಯಿತು.

ಈ ವೇಳೆ ಮಾತನಾಡಿದ ಶಾಸಕರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಹಲವು ಕಾಮಗಾರಿಗಳಿಗೆ ಕಾಂಗ್ರೆಸ್ ಸರಕಾರ ತಡೆ ನೀಡಿತ್ತು. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು ಅರ್ಧಕ್ಕೆ ನಿಂತ ಪರಿಣಾಮ, ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿಯವರಲ್ಲಿ ಅನೇಕ ಬಾರಿ ಮನವಿ ಮಾಡಿದ ನಂತರ, ತಡೆ ಹಿಡಿಯಲಾಗಿದ್ದ ಅನುದಾನಗಳು ಮತ್ತೆ ಬಿಡುಗಡೆಗೊಂಡಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.

ನಿಕಟ ಪೂರ್ವ ಪಾಲಿಕೆ ಸದಸ್ಯರಾದ ರೇವತಿ ಶ್ಯಾಂ ಸುಂದ‌ರ್ ಶೆಟ್ಟಿ, ಪ್ರಮುಖರಾದ ದೀಪಕ್ ಪೈ, ಅಮಿತ್, ಶಬರಿ ಶೆಟ್ಟಿ, ಶೈಲೇಶ್ ಶೆಟ್ಟಿ, ಅರುಣ್ ಕೊಟ್ಟಾರಿ, ಅನಿಲ್ ಕೊಟ್ಟಾರಿ, ಜಯಶ್ರೀ ಕೊಟ್ಟಾರಿ, ದೀಪಕ್ ಸುವರ್ಣ, ಉಷಾ, ಗಾಯತ್ರಿ, ಶೈಲೇಶ್ ಶೆಟ್ಟಿ, ಸುರೇಶ್, ಪ್ರವೀಣ್ ನಿಡ್ಡೆಲ್, ಲಲಿತಾ ಕೊಟ್ಟಾರಿ, ನಿತಿನ್, ವಿಖ್ಯಾತ್ ಶೆಟ್ಟಿ, ವಿನಯ್, ಸೇರಿದಂತೆ ಪರಿಸರದ ನಿವಾಸಿಗಳು, ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!