ತುಳು ಮಕ್ಕಳ ಗೀತೆ, ಕಥೆಗಳಿಗೆ ಆಹ್ವಾನ

ಮಂಗಳೂರು: ತುಳು ಭಾಷೆ ಹಾಗೂ ಸಂಸ್ಕೃತಿಯ ಉತ್ತೇಜನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ತುಲುವೆರೆ ಕಲ ಟ್ರಸ್ಟ್ (ರಿ.) ಮಂಗಳೂರು ತನ್ನ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕರಿಂದ ತುಳು ಮಕ್ಕಳ ಗೀತೆ ಹಾಗೂ ಮಕ್ಕಳ ಕಥೆಗಳನ್ನು ಆಹ್ವಾನಿಸಿದೆ.

ಆಯ್ಕೆಯಾದ ಅತ್ಯುತ್ತಮ ಮೂರು ಗೀತೆ ಹಾಗೂ ಮೂರು ಕತೆಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ಜೊತೆಗೆ ಮೇ ತಿಂಗಳಲ್ಲಿ ನಡೆಯುವ ಟ್ರಸ್ಟ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿಜೇತರನ್ನು ಗೌರವಿಸಲಾಗುತ್ತದೆ. ಆಯ್ಕೆಯಾದ ಬರಹಗಳನ್ನು ನಂತರ ಪುಸ್ತಕ ರೂಪದಲ್ಲಿಯೂ ಪ್ರಕಟಿಸಲಾಗುವುದು ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಪರ್ಧೆಗೆ ಕಳುಹಿಸುವ ಮಕ್ಕಳ ಗೀತೆಗಳು ಗರಿಷ್ಠ 12 ಸಾಲುಗಳೊಳಗೆ ಹಾಗೂ ಮಕ್ಕಳ ಕತೆಗಳು 250 ಪದಗಳೊಳಗೆ ಇರಬೇಕು. ಯಾವುದೇ ಪ್ರದೇಶದ, ಯಾವುದೇ ವಯೋಮಾನದವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆದರೆ ಕಳುಹಿಸುವ ಬರಹಗಳು ಸ್ವರಚಿತವಾಗಿದ್ದು, ಇದುವರೆಗೆ ಎಲ್ಲಿಯೂ ಪ್ರಕಟವಾಗಿರಬಾರದು ಎಂಬುದು ನಿಯಮವಾಗಿದೆ.

ಆಸಕ್ತರು ತಮ್ಮ ಬರಹಗಳನ್ನು ಮಾರ್ಚ್ 31ರೊಳಗೆ
ಅಶೋಕ ಎನ್. ಕಡೇಶಿವಾಲಯ (ಮೊ.: 7760041895) ಅಥವಾ
ವಿಶ್ವನಾಥ ಕುಲಾಲ್ ಮಿತ್ತೂರು (ಮೊ.: 9900380301) ಅವರ ವಾಟ್ಸ್ಯಾಪ್ ಸಂಖ್ಯೆಗೆ ಕಳುಹಿಸಬಹುದು ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!