ಹಚ್ಚ ಹಸುರಿನ ನಡುವೆ
ಮದುಮಗಳ ಸಿಂಗಾರದಂತೆ
ಮಿನುಗುವಳು ಭೂದೇವಿ.
ತಾನೂ ಬದುಕುವುದರೊಂದಿಗೆ
ಇತರ ಜೀವಿಗಳಿಗೂ
ಆಶ್ರಯತಾಣವಾಯಿತು ವೃಕ್ಷ.
ಸುತ್ತಲಿನ ಪರಿಸರವು
ಮನುಜನಿಗೆ ವರವು
ಸ್ವಚ್ಛ ಪರಿಸರವೇ
ಆರೋಗ್ಯದಾಯಕವು.
ಪ್ರಕೃತಿಯು ಜೀವಿಗಳಿಗೆ
ಅತಿ ಅಗತ್ಯವು
ನಾವು ಇಲ್ಲದಿರೆ ಇರುವುದು
ಪ್ರಕೃತಿಯು
ಪ್ರಕೃತಿಯು ಇಲ್ಲದಿರೆ ಮನುಜನಿಗೆ
ಇರುವುದೇ ಉಳಿಗಾಲವು?
ಇದನರಿತು ನಡೆದರೆ
ಬದುಕು ಸುಂದರ ಪಯಣ.
ಉಳಿಸೋಣ ಬೆಳೆಸೋಣ
ಮರಗಿಡ ಬಳ್ಳಿಗಳ
ಒಂದೇ ದಿನಕ್ಕಲ್ಲ ಪರಿಸರ ದಿನ
ಪ್ರತಿದಿನವು ಇರಲಿ
ಪರಿಸರ ಕಾಳಜಿಯು.
✍️..ಸುಜಿತ್ ಕುಮಾರ್ ಬೇಕೂರ್