ಮುಳ್ಳೇರಿಯಾ ದಲ್ಲಿ ನಿಯಂತ್ರಣ ತಪ್ಪಿದ ಕಾರು ಮಗುಚಿ 2 ವರ್ಷದ ಮಗು ದಾರುಣ ಮೃತ್ಯು

ಮಂಜೇಶ್ವರ : ಮುಳ್ಳೇರಿಯ ಕಾರ್ಲೇ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮಗುಚಿ ಸಂಭವಿಸಿದ ಅಪಘಾತದಲ್ಲಿ ಎರಡು ವರ್ಷದ ಮಗುವೊಂದು ದಾರುಣವಾಗಿ ಸಾವನ್ನಪ್ಪಿದೆ.

ಬೆಳ್ಳಿಗೆಯ ಎಂ. ಹರಿದಾಸ್ – ಶ್ರೀವಿದ್ಯಾ ದಂಪತಿ ಪುತ್ರಿ ಹೃದ್ಯಾನಂದ ಸಾವನ್ನಪ್ಪಿದ ಮಗು.

ಪೇಟೆಗೆ ತೆರಳಿ ಮರಳುತ್ತಿರುವ ಮನೆ ಸಮೀಪ ಕಾರು ಸ್ಟಾರ್ಟ್ ಆಗದ ಹಿನ್ನಲೆಯಲ್ಲಿ ಕಾರನ್ನು ತಳ್ಳುತ್ತಿರುವ ಮಧ್ಯೆ ಕಾರು ದಿಢೀರ್ ಮುಂದಕ್ಕೆ ಚಲಿಸಿದಾಗ ಮಗು ಕಾರಿನಡಿಗೆ ಸಿಲುಕಿ ಈ ದುರ್ಘ ಸಂಭವಿಸಿದೆ. ಘಟನೆಯಲ್ಲಿ ತಾಯಿ ಹೊರಗೆ ಎಸೆಯಲ್ಪಟ್ಟರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಕಾರು ತಳ್ಳುತ್ತಿರುವಾಗ ಹಿರಿಯ ಮಗಳು ದೇವಾನಂದ ಕಾರಿನೊಳಗಿದ್ದಳೆನ್ನಲಾಗಿದೆ. ಕಾರನ್ನು ತಳ್ಳುತ್ತಿದ್ದಾಗ ಒಮ್ಮೆಲೇ ಕಾರು ಸ್ಟಾರ್ಟ್ ಆಗಿ ಮುಂದಕ್ಕೆ ಚಲಿಸಿದೆ. ಈ ಸಂದರ್ಭ ಮಗು ಕಾರಿನಡಿಗೆ ಸಿಲುಕಿ ಈ ದುರ್ಘಟನೆ ನಡೆದಿದೆ.

ಸ್ಥಳೀಯರ ಸಹಾಯದಿಂದ ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಜೀವವನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಆದೂರು ಠಾಣಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!