ಕೇರಳ ವಿಧಾನಸಭಾ ಚುನಾವಣೆ: ಕಾಸರಗೋಡು ಕ್ಷೇತ್ರದಲ್ಲಿ ಅಶ್ವಿನಿ ಎಂ.ಎಲ್‌ಗೆ ಬಿಜೆಪಿ ಅವಕಾಶ

ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದ್ದು, ಕಾಸರಗೋಡು ಕ್ಷೇತ್ರಕ್ಕೆ M L Ashwini ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.

ಇದಕ್ಕೂ ಮೊದಲು ಬಿಡುಗಡೆಗೊಂಡ ಮೊದಲ ಪಟ್ಟಿಯಲ್ಲಿ ಮಂಜೇಶ್ವರ ಕ್ಷೇತ್ರಕ್ಕೆ K Surendran ಅವರನ್ನು ಕಣಕ್ಕಿಳಿಸಲಾಗಿದ್ದು, ಇದೀಗ ಕಾಸರಗೋಡು ಕ್ಷೇತ್ರದಲ್ಲಿ ಅಶ್ವಿನಿ ಎಂ.ಎಲ್ ಹೆಸರು ಪ್ರಮುಖವಾಗಿ ಹೊರಹೊಮ್ಮಿದೆ.

ಬಿಜೆಪಿ ರಾಜ್ಯ ಘಟಕದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಅಶ್ವಿನಿ, ಕಾಸರಗೋಡು ಜಿಲ್ಲಾ ಅಧ್ಯಕ್ಷೆಯಾಗಿ ಗುರುತಿಸಿಕೊಂಡಿದ್ದು, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದವರು. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲೂ ಕಾಸರಗೋಡಿನಿಂದ ಸ್ಪರ್ಧಿಸಿ ಪಕ್ಷದ ಮತಶೇಕಡಾವನ್ನು ಹೆಚ್ಚಿಸಿದ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಕೇರಳ ವಿಧಾನಸಭಾ ಚುನಾವಣೆಗೆ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಬಿಜೆಪಿ ತನ್ನ ಶಕ್ತಿಯನ್ನು ವಿಸ್ತರಿಸಲು ಪ್ರಮುಖ ಕ್ಷೇತ್ರಗಳಲ್ಲಿ ಹೊಸ ಹಾಗೂ ಹಳೆಯ ಮುಖಗಳ ಸಮನ್ವಯವನ್ನು ಬಳಸುತ್ತಿದೆ. ಮೊದಲ ಪಟ್ಟಿಯಲ್ಲಿ 47 ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಪ್ರಮುಖ ನಾಯಕರಿಗೂ ಅವಕಾಶ ನೀಡಲಾಗಿದೆ.

ಕಾಸರಗೋಡು ಕ್ಷೇತ್ರದಲ್ಲಿ ಯುಡಿಎಫ್, ಎಲ್‌ಡಿಎಫ್ ಹಾಗೂ ಎನ್‌ಡಿಎ ನಡುವೆ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಹೆಚ್ಚಿದ್ದು, ಅಶ್ವಿನಿ ಅಭ್ಯರ್ಥಿತ್ವವು ಚುನಾವಣಾ ಸಮೀಕರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಉತ್ತರ ಕೇರಳದಲ್ಲಿ ಬಿಜೆಪಿ ತನ್ನ ನೆಲೆ ಬಲಪಡಿಸಲು ಈ ಬಾರಿ ಹೆಚ್ಚು ಗಂಭೀರವಾಗಿ ಸ್ಪರ್ಧಿಸುತ್ತಿದ್ದು, ಕಾಸರಗೋಡು ಕ್ಷೇತ್ರದ ಫಲಿತಾಂಶ ರಾಜ್ಯ ಮಟ್ಟದಲ್ಲೂ ಗಮನ ಸೆಳೆಯುವ ನಿರೀಕ್ಷೆಯಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!