ಮಂಗಳೂರು–ತಿರುವನಂತಪುರಂ ಪ್ರಯಾಣಕ್ಕೆ ಹೊಸ ಸೌಲಭ್ಯ: ದಕ್ಷಿಣ ರೈಲ್ವೆಯಿಂದ ಮಹತ್ವದ ಘೋಷಣೆ: ಸ್ಪೆಷಲ್ ರೈಲು ಖಾಯಂ

ಮಂಗಳೂರು: ತಿರುವನಂತಪುರಂ ನಾರ್ತ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಸಂಚರಿಸುತ್ತಿದ್ದ ವೀಕ್ಲಿ ಸ್ಪೆಷಲ್ ಅಂತ್ಯೋದಯ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ಖಾಯಂಗೊಳಿಸಲಾಗಿದೆ.

Southern Railway ಪ್ರಕಟಣೆ ಪ್ರಕಾರ, ತಿರುವನಂತಪುರಂ ನಾರ್ತ್–ಮಂಗಳೂರು ಜಂಕ್ಷನ್ ವೀಕ್ಲಿ ಸ್ಪೆಷಲ್ ಅಂತ್ಯೋದಯ ಎಕ್ಸ್‌ಪ್ರೆಸ್ (06313) ಮಾ.16ರಿಂದ ಖಾಯಂ ರೈಲು (16313) ಆಗಿ ಸಂಚರಿಸುತ್ತಿದೆ. ಅದೇ ರೀತಿ ಮಂಗಳೂರು ಜಂಕ್ಷನ್–ತಿರುವನಂತಪುರಂ ನಾರ್ತ್ ವೀಕ್ಲಿ ಸ್ಪೆಷಲ್ (06314) ಮಾ.17ರಿಂದ ಖಾಯಂ ರೈಲು (16314) ಆಗಿ ಸಂಚರಿಸಲಿದೆ.

ಈ ರೈಲು ತಿರುವನಂತಪುರಂ ನಾರ್ತ್ ನಿಲ್ದಾಣದಿಂದ ಪ್ರತಿ ಸೋಮವಾರ ಸಂಜೆ 5.15ಕ್ಕೆ ಹೊರಟು ಮಂಗಳವಾರ ಬೆಳಗ್ಗೆ 6.50ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಮಂಗಳೂರು ಜಂಕ್ಷನ್‌ನಿಂದ ಪ್ರತಿ ಮಂಗಳವಾರ ಸಂಜೆ 6 ಗಂಟೆಗೆ ಹೊರಟು ಬುಧವಾರ ಬೆಳಗ್ಗೆ 7.15ಕ್ಕೆ ತಿರುವನಂತಪುರಂ ನಾರ್ತ್ ತಲುಪಲಿದೆ.

ಈ ಸೇವೆಯನ್ನು ಖಾಯಂಗೊಳಿಸಿರುವುದರಿಂದ ಈ ಮಾರ್ಗದ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗಲಿದ್ದು, ನಿಯಮಿತ ಸಂಪರ್ಕದಿಂದ ಪ್ರಯಾಣ ಸುಗಮವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!