ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಮಂಗಳೂರು: ಪವಿತ್ರ ರಮಝಾನ್ ತಿಂಗಳ ಒಂದು ತಿಂಗಳ ಉಪವಾಸವನ್ನು ಆಚರಿಸಿದ ಮುಸ್ಲಿಂ ಬಾಂಧವರು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಮುಂಜಾನೆಯಿಂದಲೇ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಜುಮಾ ಮಸೀದಿಗಳು ಮತ್ತು ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ, ಧಾರ್ಮಿಕ ಪ್ರವಚನಗಳು, ಶುಭಾಶಯ ವಿನಿಮಯ ಕಾರ್ಯಕ್ರಮಗಳು ನಡೆಯಿತು. ಹಬ್ಬದ ಅಂಗವಾಗಿ ನೆರೆಮನೆ ಹಾಗೂ ಬಂಧು-ಬಳಗದ ಮನೆಗಳಿಗೆ ಭೇಟಿ ನೀಡಿ ಸೌಹಾರ್ದತೆಯನ್ನು ಬಲಪಡಿಸಲಾಯಿತು.

ಜಿಲ್ಲೆಯ ಬಹುತೇಕ ಎಲ್ಲಾ ಮಸೀದಿ ಹಾಗೂ ಈದ್ಗಾಗಳಲ್ಲಿ ವಿಶೇಷ ನಮಾಝ್ ಬಳಿಕ ಭಕ್ತರು ಪರಸ್ಪರ ಹಸ್ತಲಾಘವ ಹಾಗೂ ಆಲಿಂಗನದ ಮೂಲಕ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮ ಕಂಡುಬಂದಿತು.

ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ತನಕ ಉಪವಾಸಿಗರು ಹೊಸ ಬಟ್ಟೆ ಧರಿಸಿ, ಅತ್ತರ್ ಹಚ್ಚಿಕೊಂಡು, ವಿವಿಧ ಬಗೆಯ ಸವಿಯೂಟಗಳನ್ನು ಸವಿದು ಹಬ್ಬವನ್ನು ಆಚರಿಸಿದರು.

ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ವಿಧಾನಸಭಾ ಸ್ಪೀಕರ್ UT Khader ಅವರು ಈದ್ ಪ್ರಾರ್ಥನೆಯಲ್ಲಿ ಭಾಗವಹಿಸಿ ಜನತೆಗೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.

ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಈದುಲ್ ಫಿತ್ರ್ ಆಚರಣೆ ಭಾವೈಕ್ಯತೆ, ಸೌಹಾರ್ದತೆ ಹಾಗೂ ಸಂತಸದ ಸಂಕೇತವಾಗಿ ಮೂಡಿಬಂತು.

SHARE
Loading spinner

Leave a Reply

Your email address will not be published. Required fields are marked *

error: Content is protected !!