ಮಂಜೇಶ್ವರ: ಉಪ್ಪಳದಲ್ಲಿ ಎಟಿಎಂಗೆ ತುಂಬಿಸಲು ತಂದಿದ್ದ ಸುಮಾರು ಅರ್ಧ ಕೋಟಿ ರೂಪಾಯಿಗಳನ್ನು ಹಗಲು ವೇಳೆಯೇ ದೋಚಿದ್ದ ಪ್ರಕರಣದ ಮುಖ್ಯ ಸಂಚುಗಾರನನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ದಿಂಡಿಗಲ್ ಮೂಲದ ಆರುಮುಖಂ (ಕಿಟ್ಟು) ಬಂಧಿತ ಆರೋಪಿ. ಈತ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದನು.
ಮಂಜೇಶ್ವರ ಎಸ್‌ಐ ದಿನೇಶ್ ರಾಜನ್ ನೇತೃತ್ವದ ತಂಡವು ಛತ್ತೀಸ್‌ಗಢದ ಅಡಗುತಾಣದಲ್ಲಿ ಈತನನ್ನು ಅತಿ ಸಾಹಸಿಕವಾಗಿ ಸೆರೆಹಿಡಿದಿದೆ. 2024ರ ಮಾರ್ಚ್ 27ರಂದು ಖಾಸಗಿ ಏಜೆನ್ಸಿಯ ವ್ಯಾನ್ ಗಾಜು ಒಡೆದು ಹಣದ ಪೆಟ್ಟಿಗೆಯನ್ನು ಕದಿಯಲಾಗಿತ್ತು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಈ ಹಿಂದೆ ಮುತ್ತುಕುಮಾರನ್ ಮತ್ತು ಕಾರ್ವರನ್ ಎಂಬ ಸಹಚರರನ್ನು ಬಂಧಿಸಲಾಗಿತ್ತು.