“ಬೆಂಕಿ ಬಿದ್ದಿದೆ ಮನೆಗೆ ಓ
ಬೇಗ ಬನ್ನಿ “ಎಂದು
ಕರೆಕೊಟ್ಟ ಮಹಾನ್ ಚೇತನ.
ಕನ್ನಡ ಸಾಹಿತ್ಯ ಲೋಕದ ಧೀಮಂತ ನಯನ
ಗಡಿನಾಡ ಹೆಮ್ಮೆಯ ಕವಿಮನ.
ಶೈಕ್ಷಣಿಕ ಕ್ಷೇತ್ರದಲ್ಲೂ ಮಹಾನ್ ಕ್ರಾಂತಿ
ನಾಡು-ನುಡಿ, ಐಕ್ಯತೆ-ಪರಂಪರೆಯಲ್ಲೂ ಪ್ರೀತಿ
ನುಡಿದಂತೆ ನಡೆದ ಅಪ್ಪಟ ಕನ್ನಡ ಪ್ರೇಮಿ
ಸಾಧಿಸಿರುವಿರಿ ಕೃಷಿ ಕ್ಷೇತ್ರದಲ್ಲೂ ಪ್ರಗತಿ
ನಿಮ್ಮ ಬದುಕು-ಬರಹಗಳೇ ನಮಗೆ ಸ್ಪೂರ್ತಿ.
ಐಕ್ಯತೆಯ ಮಂತ್ರವ ‘ಐಕ್ಯಗಾನ’ದಿ ಪಸರಿಸಿದಿರಿ
ಗಡಿನಾಡಿನ ಕಿಡಿಯಾಗಿ ಪ್ರಜ್ವಲಿಸಿದಿರಿ
ದುಡಿತವೇ ನನ್ನ ದೇವರೆಂದು ಸಾರಿರುವಿರಿ
ಕನ್ನಡಿಗರ ಮನೆ-ಮನದಿ ನೆಲೆಸಿರುವಿರಿ.
✍️ ಸುಜಿತ್.ಕುಮಾರ್, ಬೇಕೂರು.