ಹೊಸಂಗಡಿ: ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ನಡೆಯುತ್ತಿರುವ ಹರಿಕಥಾ ಸಪ್ತಾಹದ ಅಂಗವಾಗಿ ಇಂದು (ಮಾ. 26, ಗುರುವಾರ) ಸಂಜೆ 6:00 ಗಂಟೆಗೆ ಎರಡನೇ ದಿನದ ಕಾರ್ಯಕ್ರಮ ಜರುಗಲಿದೆ.
ಈ ದಿನದ ಪ್ರಮುಖ ಆಕರ್ಷಣೆಯಾಗಿ ಹರಿದಾಸ ಜಯಾನಂದ ಹೊಸದುರ್ಗ ಅವರು ‘ಸತ್ಯದಾಸ ಸಾವಿತ್ರಿ’ ಎಂಬ ಹರಿಕಥೆಯನ್ನು ಪ್ರಸ್ತುತಪಡಿಸಲಿದ್ದಾರೆ.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಸಾರುವ ಈ ಹರಿಕಥಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಕಲಾಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.