ಮಂಗಳೂರಿನಲ್ಲಿ ಲಯನ್ಸ್ ಕ್ಲಬ್ “ಸುಮಂಗಲ ಜಿಲ್ಲಾ ಕನ್ವೆನ್ಷನ್” ಏಪ್ರಿಲ್ 18 ಹಾಗೂ 19ರಂದು

ಲಯನ್ಸ್ ಕ್ಲಬ್ ಜಿಲ್ಲೆ 317 ಡಿ ವತಿಯಿಂದ “ಸುಮಂಗಲ ಜಿಲ್ಲಾ ಕನ್ವೆನ್ಷನ್” ಸಮ್ಮೇಳನವನ್ನು ಏಪ್ರಿಲ್ 18 ಹಾಗೂ 19ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನಾ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ರೈ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಸಮ್ಮೇಳನವನ್ನು ಜಿಲ್ಲೆಯ ಪ್ರಥಮ ಮಹಿಳೆ ಮಮತಾ ಶೆಣೈ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಗವರ್ನರ್ ಕುಡುಪಿ ಅರವಿಂದ ಶೆಣೈ ವಹಿಸಲಿದ್ದಾರೆ ಎಂದರು .

ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ನಿರ್ದೇಶಕ ಪಂಕಜ್ ಮೆಹ್ತಾ ವಂಶಿಧರ್ ಬಾಬು , ದಿಕ್ಕೂಚಿ ಭಾಷಣಗಾರರಾಗಿ ವಿದ್ವಾನ್ ಸಿ.ಎಸ್. ನಟೇಶ್ , ನಿಕಟಪೂರ್ವ ಗವರ್ನರ್ ಭಾರತೀ ಬಿ.ಎಂ., ಪ್ರಥಮ ಉಪರಾಜ್ಯಪಾಲ ತಾರಾನಾಥ್ ಎಚ್.ಎಂ., ದ್ವಿತೀಯ ಉಪರಾಜ್ಯಪಾಲ ಲಯನ್ ಗೋವರ್ಧನ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು .

ಮೊಬೈಲ್ ಕಿಚ್ಚೆನ್ ಮತ್ತು ಲಯನ್ಸ್ ವೃಕ್ಷ ಬೀಜಾಂಕುರ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸುವ ವಿಸ್ವಾಸವನ್ನು ಅವರು ವ್ಯಕ್ತಪಡಿಸಿದರು .

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಸುಕಲತಾ ಭಂಡಾರಿ , ಚೀಪ್ ಅಡ್ವೈಸರ್ ದೇವದಾಸ್ ಭಂಡಾರಿ , ಕೋಶಾಧಿಕಾರಿ ಉಮಾ ಹೆಗಡೆ, ಜಿಲ್ಲಾ ಸಂಪರ್ಕ ಅಧಿಕಾರಿ ಸುಧರ್ಶನ ಪಡಿಯಾರ್ ವಿಟ್ಲ , ಕೋಶಾಧಿಕಾರಿಯಾದ ಬಾಲಕೃಷ್ಣ ಹೆಗಡೆ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!