ಕುಂಬಳೆ ಪೆರಾಲ್‌ನಲ್ಲಿ ಕಾಣಿಸಿಕೊಂಡ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡುವ ಫ್ಲಕ್ಸ್ ಬೋರ್ಡ್

ವಿಧಾನಸಭಾ ಚುನಾವಣೆ ದಿನಾಂಕ ಹತ್ತಿರ ಬಂದಂತೆ ಮಂಜೇಶ್ವರದಲ್ಲಿ ಹೊಸ ತಿರುವು , ವಿವಾದಗಳು ಸಮಸ್ಯೆಗಳು ಹೊರಬರುತ್ತಿದೆ.
ಯುಡಿಎಫ್‌ನ ಶಕ್ತಿ ಕೇಂದ್ರವೆಂದು ಕರೆಯಲ್ಪಡುವ ಕುಂಬಳೆ ಗ್ರಾಮ ಪಂಚಾಯತ್‌ನ ಪೆರಾಲ್‌ನಲ್ಲಿ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡುವ ಫ್ಲಕ್ಸ್ ಬೋರ್ಡ್ ಕಾಣಿಸಿಕೊಂಡಿದೆ. ಫ್ಲಕ್ಸ್ ಬೋರ್ಡ್ ನ್ನು ಕಳೆದ ದಿನ ಸ್ಥಾಪಿಸಲಾಗಿದೆ ಎಂದು ತಿಳಿದು ಬಂದಿದೆ

ಸ್ಥಳೀಯ ಸಂಸ್ಥೆ ಚುನಾವಣೆಗೆ ಮುನ್ನ ವಾರ್ಡ್ ವಿಭಾಗದಲ್ಲಿ ಪೆರಾಲ್ ವಾರ್ಡ್‌ನಿಂದ ಸುಮಾರು 70 ಮನೆಗಳನ್ನು ಬೇರ್ಪಡಿಸಿರುವುದನ್ನು ವಿರೋಧಿಸಿ ಫ್ಲಕ್ಸ್ ಬೋರ್ಡ್‌ ಮೂಲಕ ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡಲಾಗಿದೆ. ಸ್ಥಳೀಯರನ್ನು ಸಮಾಲೋಚಿಸದೆ ಕೆಲವು ಜನರ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಮಾತ್ರ ವಾರ್ಡ್ ವಿಭಜನೆ ಮಾಡಲಾಗಿದೆ, ಮತ್ತು ಮೊಗ್ರಾಲ್ ನ್ನು ಪೆರಾಲ್ ವಾರ್ಡ್‌ನ ಒಂದು ಭಾಗದಲ್ಲಿರುವ ಕೆಕೆ ವಾರ್ಡ್‌ಗೆ ವರ್ಗಾಯಿಸಿರುವ ಕ್ರಮ ಆಕ್ಷೇಪಾರ್ಹ ಎಂದು ಫ್ಲಕ್ಸ್ ಬೋರ್ಡ್ ಸೂಚಿಸುತ್ತದೆ.

ಕೆಕೆ ಪುರಂ ಜೊತೆ ಯಾವುದೇ ಸಂಬಂಧವಿಲ್ಲದ ಪೆರಾಲ್ ಪ್ರದೇಶವನ್ನು ಉದ್ದೇಶಪೂರ್ವಕವಾಗಿ ಪೆರಾಲ್ ವಾರ್ಡ್‌ನಿಂದ ಹೊರಗಿಡಲಾಗಿದೆ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ . ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಅದು ಮಂಜೇಶ್ವರ ಚುನಾವಣೆಯಲ್ಲಿ ಪ್ರತಿಫಲಿಸುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ .

SHARE
Loading spinner

Leave a Reply

Your email address will not be published. Required fields are marked *

error: Content is protected !!